ವ್ಯಕ್ತಿಯೋರ್ವನನ್ನು ಮಚ್ಚಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೊಪ್ಪಳದ ತಾವರಗೇರಾ ಹಳೆ ಬಸ್ ನಿಲ್ದಾಣದ ಬೇಕರಿ ಮುಂದೆ ಮೇ 31ರ ಶನಿವಾರ ರಾತ್ರಿ ನಡೆದಿದೆ.
ಚೆನ್ನಪ್ಪ ಹರಿಜನ್ (30) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಈ ಘಟನೆ ಹಿನ್ನಲೆಯಲ್ಲಿ ಜನರಲ್ಲಿ ಆತಂಕ ಮೂಡುವಂತಾಗಿದೆ.
ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ. ಎಲ್.ಆರ್. ಅರಸಿದ್ದಿ, ಗಂಗಾವತಿ ಡಿಎಸ್ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ್ ಬಿಸನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿಯನ್ನು ಮಚ್ಚಿಯಿಂದ ಕೊಚ್ಚಿ ಕೊಲೆ!

















