ಅರಣ್ಯ ಇಲಾಖೆ ಸುಳ್ಯವಲಯ, ಸಂಪಾಜೆ ಶಾಖೆ ವತಿಯಿಂದ ತೊಡಿಕಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ ಭಟ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಅವರು ಪರಿಸರ ರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಆರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮಟ್ಟೆ ಅವರು ವಿದ್ಯಾರ್ಥಿಗಳಿಗೆ ವಿಶೇಷ ಟಾಸ್ಕನ್ನು ನೀಡಿ ಪ್ರತಿ ತಿಂಗಳು ಯಾವ ವಿದ್ಯಾರ್ಥಿ ಅತಿ ಹೆಚ್ಚು ಕಸ ಸಂಗ್ರಹ ಮಾಡುತ್ತಾನೋ ಅವರಿಗೆ ಪ್ರತಿ ತಿಂಗಳು ಬಹುಮಾನ ನೀಡುವುದಾಗಿ ಹೇಳಿದರು.
ಇಂದು ಕೊಟ್ಟ ಗಿಡಗಳ ಪೈಕಿ ಯಾವ ವಿದ್ಯಾರ್ಥಿ ಸಾಕಿದ ಗಿಡ ಆರು ತಿಂಗಳು ಕಳೆದ ಬಳಿಕ ಅತ್ಯುತ್ತಮವಾಗಿ ಬೆಳೆದಿರುತ್ತದೆಯೋ ಅಂತಹ ಮೊದಲ ಮೂರು ಉತ್ತಮ ಗಿಡಗಳನ್ನು ಸಾಕಿದ ಮೂರು ವಿದ್ಯಾರ್ಥಿ ಗಳಿಗೂ ಅರಣ್ಯ ಇಲಾಖೆ ವತಿಯಿಂದ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ವತಿಯಿಂದ ಬಹುಮಾನ ನೀಡುವುದಾಗಿ ವಲಯ ಅರಣ್ಯಧಿಕಾರಿ ವೆಂಕಟೇಶ್ ಹೇಳಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಲಾಖೆ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಗಿಡಗಳನ್ನು ವಿತರಿಸಲಾಯಿತು. ಗಸ್ತು ಅರಣ್ಯ ಪಾಲಕ ಮನೋಜ್ ಸ್ವಾಗತಿಸಿ, ಸಹ ಶಿಕ್ಷಕ ಬಲರಾಜ್ ವಂದಿಸಿದರು. ಸಹ ಶಿಕ್ಷಕಿ ಸ್ನೇಹಲತಾ ಕಾರ್ಯಕ್ರಮ ನಿರೂಪಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಲಾ ಸಹ ಶಿಕ್ಷಕರು ಅಡುಗೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ತೊಡಿಕಾನ : ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ

















