ಬಾಹ್ಯಾಕಾಶ ವಿಜ್ಞಾನದಲ್ಲಿ ಹಲವು ದಾಖಲೆ ಸೃಷ್ಟಿಸಿರುವ ಭಾರತ, ಬುಧವಾರ ಇನ್ನೊಂದು ಇತಿಹಾಸ ರಚನೆ ಯತ್ತ ಹೆಜ್ಜೆ ಹಾಕಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಭಾರತೀಯ ವಾಯ ಪಡೆಯ ಪೈಲಟ್ ಶುಭಾಂಶು ಶುಕ್ಲಾ ರನ್ನು ಹೊತ್ತ ಅಮೆರಿ ಕದ ಆ್ಯಕ್ಸಿಯಾಮ್ ನೌಕೆ ಬುಧವಾರ ಸಂಜೆ 5.30ರ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸ ಲಿದೆ. ಈ ಮೂಲಕ ಶುಭಾಂಶು 41 ವರ್ಷ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಆಗಲಿದ್ದಾರೆ.
ಭಾರತೀಯ ಪ್ರಜೆಯೊಬ್ಬರು ಮೊದಲ ಬಾರಿ ಅಂತರಿಕ್ಷ ಕೇಂದ್ರಕ್ಕೆ ಲಗ್ಗೆ ಇಡಲಿದ್ದಾರೆ. ಇಂದು ಸಂಜೆ 5.30ಕ್ಕೆ ಶುಕ್ಲಾ ನಭಕ್ಕೆ ಹಾರಾಟ ಮಾಡಲಿದ್ದಾರೆ.
ಶುಕ್ಲಾ ಜತೆ ಇನ್ನೂ 3 ಗಗನಯಾತ್ರಿ ಗಳು ಬಾಹ್ಯಾಕಾಶ ಯಾನ ಮಾಡಲಿದ್ದಾರೆ.28 ಗಂಟೆ ಪ್ರಯಾಣದ ಬಳಿಕ ನಾಳೆ ರಾತ್ರಿ 10ಕ್ಕೆ ಅಂತರಿಕ್ಷ ಕೇಂದ್ರಕ್ಕೆ ತಲುಪಲಿದ್ದಾರೆ.
14 ದಿನಗಳ ಕಾಲ ಅಂತರಿಕ್ಷ ವಾಸ ಕೈಗೊಳ್ಳಲಿದ್ದು ಅಲ್ಲೇ ಇದ್ದು 60 ಪ್ರಯೋಗಗಳು ನಡೆಯಲಿವೆ ಎಂದು ಮಾಹಿತಿ ದೊರೆತ್ತಿವೆ.
ಅಂತರಿಕ್ಷ ನಿಲ್ದಾಣಕ್ಕಿಂದು ಮೊದಲ ಭಾರತೀಯ: ಸಂಜೆ ಯಾನಾರಂಭ
