ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (68) ಅವರು ಮೃತಪಟ್ಟಿದ್ದು, ವಿಮಾನದಲ್ಲಿದ್ದ 242ಕ್ಕೂ ಮಂದಿ ಮೃತಪಟ್ಟಿದ್ದಾರೆಂದು ಅಲ್ಲಿನ ಮೂಲಗಳು ತಿಳಿವೆ.
ಇಂದು ಮಧ್ಯಾಹ್ನ 1.50 ರ ಸುಮಾರಿಗೆ ವಿಮಾನ ಟೇಕ್ ಆಫ್ ಆದ ಬಳಿಕ ಇಪ್ಪತ್ತು ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಈ ವೇಳೆ ವಿಮಾನದ ಎಂಜಿನ್‌ನಲ್ಲಿ ತೀವ್ರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನದ ಪೈಲಟ್ ಈ ವಿಷಯವನ್ನು ‘ಎಟಿಸಿ’ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ನಿರ್ಮಾಣ ಹಂತದ ಕಟ್ಟಡವಿರುವ ಜನ ವಸತಿ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದು ಬಂದಿದೆ.
ಟಾಟಾ ಒಡೆತನಕ್ಕೆ ಸೇರಿದ ವಿಮಾನವು ಅಹಮದಾಬಾದ್ ನಿಂದ ಲಂಡನ್ ನತ್ತ ತೆರಳುತ್ತಿತ್ತು.
ಗುಜರಾತ್ : ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಹಿತ 242 ಮಂದಿ ಸಾವು
