ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಪುತ್ತೂರಿನಲ್ಲಿ ಜೂನ್ 15 ರಂದು ರಾತ್ರಿ ನಡೆದಿದೆ. ಚಿಕ್ಕಪುತ್ತೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಚಿಂತನ್ ಅವರ ಪತ್ನಿ ರೇಷ್ಮಾ ಆತ್ಮಹತ್ಯೆಗೆ ಶರಣಾದವರು.
ಸುರತ್ಕಲ್ ನವರಾದ ರೇಷ್ಮಾ 4 ವರ್ಷಗಳ ಹಿಂದೆ ಚಿಂತನ್ ಅವರನ್ನು ಮದುವೆಯಾಗಿದ್ದರು. ಜೂನ್ 15 ರಂದು ರೇಷ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತಿ ಚಿಂತನ್ ಹಾಗೂ ಮೂರು ವರ್ಷದ ಮಗಳನ್ನು ಅಗಲಿದ್ದಾರೆ.
ಗರ್ಭಿಣಿ ಮಹಿಳೆ ಆತ್ಮಹತ್ಯೆ
