ಹಳ್ಳಿ ಹುಡುಗನಿಗೆ ಒಲಿಯಿತು 30 ಲಕ್ಷ ಮೌಲ್ಯದ ಎರಡು ಬೆಡ್ ರೂಮಿನ ಪ್ಲಾಟ್ ಮನೆ

ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಬೈಟ್ ಭಾರತ್’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಲಕ್ಕಿ ಕೂಪನ್ ಯೋಜನೆಯ ಡ್ರಾದಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಯುವಕನೊಬ್ಬ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ಎರಡು ಬೆಡ್ ರೂಂನ ಮನೆಯನ್ನು ತನ್ನದಾಗಿಸಿಕೊಂಡಿದ್ದಾನೆ.
ಮಂಡೆಕೋಲು ಗ್ರಾಮದ ಮಾವಂಜಿ, ಹೊಸೊತ್ತು ದಾಸಪ್ಪ ಗೌಡ ಹಾಗೂ ಯಶೋಧಾ ದಂಪತಿಗಳ ಪುತ್ರ ಚೇತನ್ ಕುಮಾರ್ ಎಂಬ ಯುವಕನೇ ಈ ಅದೃಷ್ಟಶಾಲಿಯಾಗಿದ್ದಾನೆ. ಪದವಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಫ್ಯಾಬ್ರಿಕೇಶನ್ ಕೆಲಸದಲ್ಲಿ ತೊಡಗಿಕೊಂಡಿರುವ ಚೇತನ್ ತನ್ನ ಗಳಿಕೆಯ ಹಣದಲ್ಲಿ ‘ಬೈಟ್ ಭಾರತ್‌’ ಸಂಸ್ಥೆಯ ಯೋಜನೆಯ ಸದಸ್ಯನಾಗಿ ತಿಂಗಳಿಗೆ ರೂ.1000 ಪಾವತಿಸುತ್ತಿದ್ದ. ಒಟ್ಟು ಹತ್ತು ತಿಂಗಳು ಹಣ ಪಾವತಿಸಿದ ಬಳಿಕ ಇದೀಗ ಅದೃಷ್ಟ ಖುಲಾಯಿಸಿ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ಮನೆಯ ಒಡೆಯನಾಗಿದ್ದಾನೆ.
ಸಂಸ್ಥೆಯ ಯೋಜನೆಯನ್ವಯ ಸದಸ್ಯನೊಬ್ಬ ತಿಂಗಳಿಗೆ ರೂ.1000 ಪಾವತಿಸಬೇಕು. ಪ್ರತೀ ತಿಂಗಳ 13 ನೇ ದಿನಾಂಕದಂದು ಲಕ್ಕಿ ಕೂಪನ್ ಡ್ರಾ ನಡೆಯುತ್ತದೆ. ಲಕ್ಕಿ ಕೂಪನ್ ನ ವಿಜೇತರಿಗೆ ಎರಡು ಬೆಡ್ ರೂಂನ ಮನೆ, ಕಾರು, ಬೈಕ್, ಸೈಟ್ ಸೇರಿದಂತೆ ಇತರ ಆಕರ್ಷಕ ಬಹುಮಾನಗಳಿರುತ್ತವೆ. ಡ್ರಾ ನಡೆದಾಗ ವಿಜೇತರಾಗದ ಸದಸ್ಯರಿಗೂ ಅವರು ಇಪ್ಪತ್ತು ಕಂತುಗಳಲ್ಲಿ ಪಾವತಿಸಿದ ಒಟ್ಟು ಮೊತ್ತ ರೂ. 20,000 ಗಳಿಗೆ ಸರಿಹೊಂದುವಂತೆ ವಿವಿಧ ವಸ್ತುಗಳನ್ನು ಸಂಸ್ಥೆ ನೀಡುತ್ತದೆ.
ಜೂನ್ 13 ರಂದು ನಡೆದ ಡ್ರಾದಲ್ಲಿ ಚೇತನ್ ಕುಮಾರ್, ಯೋಜನೆಯ ಪ್ರಧಾನ ಬಹುಮಾನವಾದ ಎರಡು ಬೆಡ್ ರೂಂನ ಮನೆಯ ವಿಜೇತನಾಗಿ ಹೊರಹೊಮ್ಮಿದ್ದಾನೆ. ಮಂಡೆಕೋಲು ಪೇಟೆಯ ಒಳಭಾಗದ ಅರಣ್ಯದಂಚಿನ ಭಾಗದಲ್ಲಿ ವಾಸವಾಗಿದ್ದ ಚೇತನ್ ಕುಟುಂಬಕ್ಕೆ ಈ ಲಕ್ಕಿ ಕೂಪನ್ ನ ಮನೆ ವರದಾನವಾಗಿ ಪರಿಣಮಿಸಿದೆ. ಆಸಕ್ತರು ಈ ಲಿಂಕ್ ಒತ್ತಿ ಬ್ರೈಟ್ ಭಾರತ್ ಗ್ರೂಪ್ ಸೇರಬಹುದು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top