ಸರಕಾರಿ ಪ್ರೌಢಶಾಲೆ ಅಜ್ಜಾವರ ದಲ್ಲಿ ವಿಶ್ವ ಯೋಗ ದಿನಾಚರಣೆ, ವನಮಹೋತ್ಸವ ಹಾಗೂ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹೊಸದಾಗಿ ಶಾಲೆಗೆ ದಾಖಲಾತಿಯಾದ ವಿದ್ಯಾರ್ಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಇಕೋ ಕ್ಲಬ್ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಉಪ ವಲಯ ಅರಣ್ಯಾಧಿಕಾರಿ ಶ್ರೀ ಸಂದೀಪ್ ಅವರು ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಸುಂದರ ಭಾರತ್ ಟ್ರಸ್ಟ್ ವತಿಯಿಂದ ನೀಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಶಾಲಾ ಮುಖ್ಯ್ಯೋಪಾಧ್ಯಯರಾದ ಗೋಪಿನಾಥ್ ಮೆತ್ತಡ್ಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ಲೀಲಾ ಮನಮೋಹನ್, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಚನಿಯ ಕಲ್ತಡ್ಕ,ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ,ಗಸ್ತು ಅರಣ್ಯ ಪಾಲಕರಾದ ಗೀತಾ ಬಿ, ದೀಪಕ್ ಕೆ. ಎಸ್, ಭಾಗ್ಯ ಪಿ ಸಿ, ಪತ್ರಪ್ಪ ಹಾಗೂ ಅರಣ್ಯ ವೀಕ್ಷಕರಾದ ಶ್ರೀಧರ್, ಭವಿತ್, ಶಾಲಾ ಶಿಕ್ಷಕ ವೃಂದ, ಪೋಷಕರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ ,ಶಿಕ್ಷಕರಾದ ಅಶೋಕ್ ಅವರು ಧನ್ಯವಾದಗಳು ಮಾಡಿದರು.
ಅಜ್ಜಾವರ : ವಿಶ್ವ ಯೋಗ ದಿನಾಚರಣೆ

















