ಸಂಪಾಜೆ ಗ್ರಾಮದ ಪೇರಡ್ಕ ಮಸೀದಿ ಪರಿಸರದಲ್ಲಿ ಒಂಟಿ ಸಲಗ ಭೀತಿಯಲ್ಲಿ ಪರಿಸರ ನಿವಾಸಿಗಳು: ಸಂಪಾಜೆ ಗ್ರಾಮದ ಪೇರಡ್ಕದ ಮಸೀದಿ ಮದರಸ ಹಾಗು ಪೆರುಂಗೋಡಿ, ಅಡ್ಯಡ್ಕ ಪರಿಸರದಲ್ಲಿ ಸೋಮವಾರ ರಾತ್ರಿ ಎಂಟು ಗಂಟೆಗೆ ಒಂಟಿ ಕಾಡಾನೆ ಪ್ರತ್ಯಕ್ಷ ಗೊಂಡು ಪರಿಸರದ ನಿವಾಸಿಗಳು ಪೇರಡ್ಕ ಗೂನಡ್ಕ ಮದರಸ ವಿದ್ಯಾರ್ಥಿಗಳು ಭಯ ಭೀತರಾದರು, ಪೇರಡ್ಕ ಮೋಹಿಯದ್ದಿನ್ ಜುಮಾ ಮಸೀದಿಯ ಅಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ ಶಾಹಿದ್ ತೆಕ್ಕಿಲ್,ಸಂಪಾಜೆ ಗ್ರಾಮ ಪಂಚಯತ್ ಮಾಜಿ ಅಧ್ಯಕ್ಷರು ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ ಸ್ಥಳಕ್ಕೆ ತಕ್ಷಣ ಬೇಟಿ ನೀಡಿ ಪರಿಸರದ ಜನರಿಗೆ ಧೈರ್ಯ ತುಂಬಿದರು, ವಿಷಯವನ್ನು ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಅವರ ಗಮನಕ್ಕೆ ತಂದಾಗ ಅರಣ್ಯ ಇಲಾಖೆಯ ವಿಶೇಷ ಪಡೆ ರಾತ್ರಿ ಪೇರಡ್ಕಕ್ಕೆ ಆಗಮಿಸಿ ಆನೆಯನ್ನು ಸಿಡಿಮದ್ದು ಸಿಡಿಸಿ ಓಡಿಸಿದರು, ಭಯದ ವಾತಾವರಣದಲ್ಲಿದ್ದ ಪೇರಡ್ಕ ಮದ್ರಸದ ಅರೇಬಿಕ್ ಶಾಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತೆರಳಲು ಮಸೀದಿಯ ಉಪಾಧ್ಯಕ್ಷರಾದ ಟಿ. ಬಿ. ಹನೀಫ್ ಅವರು ವಿಶೇಷ ಮುತುವರ್ಜಿ ವಹಿಸಿ ವಾಹನದ ಮೂಲಕ ಎಲ್ಲಾ ಮಕ್ಕಳನ್ನು ಗೂನಡ್ಕ, ದರ್ಕಾಸ್ ನ ಅವರವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು, ಸ್ಥಳದಲ್ಲಿ ರಹೀಂ ಬೀಜದಕಟ್ಟೆ,ಆಂಬುಲೆನ್ಸ್ ಚಾಲಕ ಸಾಂತ್ವನ ತಂಡದ ಸಿದ್ದೀಕ್ ಗೂನಡ್ಕ, ಸಾದು ಮೊನ್ ತೆಕ್ಕಿಲ್ ಪೇರಡ್ಕ, ಜುರೈದ್ ತೆಕ್ಕಿಲ್ ಪೇರಡ್ಕ, ಮೊಹಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಅಶ್ರಫ್ ತೆಕ್ಕಿಲ್ ಪೇರಡ್ಕ,ಜುನೈದ್ ಟಿ.ಬಿ, ದರ್ಕಾಸ್,ಶಂಸುದ್ದಿನ್ ದರ್ಕಾಸ್, ಅಮೀರ್ ಗೂನಡ್ಕ, ಯಹ್ಯ ದೊಡ್ಡಡ್ಕ ಮೊದಲಾದವರ ಉಪಸ್ಥಿತರಿದ್ದು ಆನೆಯ ಚಲನ ವಲನ ಬಗ್ಗೆ ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ವಲಯ ಅರಣ್ಯಧಿಕಾರಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ತಕ್ಷಣ ಸ್ಪಂದಿಸಿದ್ದು ಇಲಾಖೆಯವರನ್ನು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಅಭಿನಂದಿಸಿದರು.
ಪೇರಡ್ಕ ಮಸೀದಿ ಸಮೀಪ ಒಂಟಿ ಸಲಗ ಪ್ರತ್ಯಕ್ಷ

















