ಅರಂತೋಡು; ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಅಪಘಾತ,ಒರ್ವ ಮಹಿಳೆ ಸಾವು, ಇಬ್ಬರು ಗಂಭೀರ,ಅನೇಕ ಮಂದಿಗೆ ಗಾಯ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರಂತೋಡು; ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಅಪಘಾತ,ಒರ್ವ ಮಹಿಳೆ ಸಾವು, ಇಬ್ಬರು ಗಂಭೀರ,ಅನೇಕ ಮಂದಿಗೆ ಗಾಯ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಅರಂತೋಡು ಬಳಿಯ ಉದಯನಗರ ಎಂಬಲ್ಲಿ ಕೆಎಸ್ಆರ್ಟಿಸಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ
ಅಪಘಾತದಲ್ಲಿ ಒರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡು ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ವರದಿಯಾಗಿದೆ.
ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಹಾಗೂ ಮಡಿಕೇರಿಯಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್‌ಗಳ ನಡುವೆ ಸುಳ್ಯ ತಾಲೂಕಿನ ಅರಂತೋಡು ಬಳಿಯ ಉದಯನಗರ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರಿಗೆ ಚಿಕಿತ್ಸೆಗೆ ತೆರಳಿ ಮಡಿಕೇರಿಗೆ ಹಿಂತಿರುಗುತ್ತಿದ್ದ ಕುಶಾಲನಗರದ ಗುಡ್ಡೆ ಹೊಸೂರು ಭಾರತಿ (50) ಎಂಬವರು ತೀವ್ರ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತರಾಗಿದ್ದಾರೆ. ಚೈತ್ರ (22), ಮಾಯಿಲ್ಪ (43), ಶ್ರಾವ್ಯಶ್ರೀ (24), ಕುಮುದಿನಿ (24), ಯಮುನಾ (55), ವೇದಿಕಾ (10), ಯಕ್ಷಿತಾ (22), ಸಮದ್ (38), ಮುತ್ತಮ್ಮ (37), ಚಂದ್ರಾವತಿ (43), ತಿರುಮಲೇಶ್ವರ (49), ಸೋನಿ ಹೆಚ್.ಪಿ. (21), ಚಿದಾನಂದ (42), ನಯನ ವಿತೋಬಾರಾವ್ (25), ಸುಬ್ರಮಣಿ (51), ಕಾವೇರಮ್ಮ (35), ಅಭಿಲಾಷ್ (21), ಜಯಂತ್ (17), ಕರಣ್ (37) ಮೊದಲಾದವರು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕೆಲವರು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ‌ ಇದರಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top