ಹೊಸ ಬೆಳೆಗಳನ್ನು ಪರಿಚಯಿಸುವ ಮೂಲಕ ರೈತರು ಸರಕಾರದಿಂದ ಮಾಹಿತಿ ಪಡೆದುಕೊಳ್ಳಬೇಕು : ಮುರುವ ಮಹಾಬಲ ಭಟ್

ಹೊಸ ಬೆಳೆಗಳನ್ನು ಪರಿಚಯಿಸುವ ಮೂಲಕ ರೈತರು ಬದುಕು ಕಟ್ಟಿಕೊಳ್ಳುವುದಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಸರ್ಕಾರದ ಮಾಹಿತಿ ಪಡೆದುಕೊಳ್ಳುವ ಕಾರ್ಯ ಕೃಷಿಕರಿಂದ ನಡೆಯಬೇಕು ಎಂದು ಕೃಷಿಕ ಮುರುವ ಮಹಾಬಲಭಟ್ ಹೇಳಿದರು.
ಅವರು ಅಳಿಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಶ್ರೀ ಭಾರತಿ ಎಣ್ಣೆ ತಾಳೆ ಬೆಳಗಾರರ ಸಹಕಾರಿ ಸಂಘ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಅಳಿಕೆ ಗ್ರಾಮ ಪಂಚಾಯಿತಿ, ಕಂಪುಕೃಷಿ ಮತ್ತು ತೋಟಗಾರಿಕೆ ರೈತ ಉತ್ಪಾದಕರಕಂಪನಿ ಕುದ್ದುಪದವು, ಅಳಿಕೆ ಕೃಷಿ ಪತ್ತಿನ ಸಹಕಾರಿಸಂಘ ಸಹಯೋಗದಲ್ಲಿ ಎಣ್ಣೆ ತಾಳೆ ಬೆಳೆ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭಪೂಜಾರಿ ಸಣ್ಣಗುತ್ತು ಅಧ್ಯಕ್ಷತೆ ವಹಿಸಿ, ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಆರೋಗ್ಯದ ಮೇಲೆಪರಿಣಾಮ ಬೀರುತ್ತಿದೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆಮಾಡಿಕೊಳ್ಳಬೇಕು ಹಾಗೂ ವೈಜ್ಞಾನಿಕ ಪದ್ಧತಿ ಮೂಲಕಕೃಷಿ ನಡೆಸಲು ಆಧುನಿಕ ಯಂತ್ರಗಳು ಬಂದಿದ್ದರೂ,ಯುವ ಸಮುದಾಯ ಕೃಷಿಯತ್ತ ಆಸಕ್ತಿ ತೋರಿಸುತ್ತಿಲ್ಲಎಂದರು.
ಅಳಿಕೆ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷಭಾಸ್ಕರ ಮಡಿಯಾಲ, ಕಂಪು ವ್ಯವಸ್ಥಾಪಕನಿರ್ದೇಶಕ ಗೋಪಾಲಕೃಷ್ಣ ಭಟ್‌ ಉಪಸ್ಥಿತರಿದ್ದರು.ಮಾಣಿಮೂಲೆ ಗೋವಿಂದ ಭಟ್ ಪ್ರಾರ್ಥಿಸಿದರು.ಸಹಕಾರ ತೋಟಗಾರಿಕೆ ನಿರ್ದೇಶಕ ದಿನೇಶ್
ಸ್ವಾಗತಿಸಿದರು. ತೋಟಗಾರಿಕಾ ಇಲಾಖೆ ಹಿರಿಯಸಹಾಯಕ ತೋಟಗಾರಿಕೆ ನಿರ್ದೇಶಕ ಜೋಪ್ರದೀಪ್‌ ಡಿಸೋಜ ಪ್ರಸ್ತಾವನೆಗೈದರು. ಕಂಪು ಕಚೇರಿಮೇಲ್ವಿಚಾರಕ ನಾಗರಾಜ ವಂದಿಸಿದರು.ವಿವಿಧ ವಿಷಯದ ಬಗ್ಗೆ ಮಾಹಿತಿಅಡಕೆಗೆ ಪರ್ಯಾಯ ಬೆಳೆಯಾಗಿಎಣ್ಣೆ ತಾಳೆ ಬೆಳೆ ಪರಿಚಯ,ಅವಕಾಶಗಳು ಹಾಗೂ ತೋಟಗಾರಿಕೆಇಲಾಖೆ ಸವಲತ್ತುಗಳ ಬಗ್ಗೆ ಹಿರಿಯಸಹಾಯಕ ತೋಟಗಾರಿಕೆ ನಿರ್ದೇಶಕಜೋ ಪದೀಪ ಡಿಸೋಜ, ದ.ಕಮತ್ತುತಾಳೆ ಕೃಷಿಯ ಸ್ವಂತ ಅನುಭವ ಹಂಚಿಕೆಯನ್ನು ರೈತರೊಂದಿಗೆ ಸುಳ್ಯ ಆಲೆಟ್ಟಿಯ ಅನುಭವಿ ತಾಳೆಬೆಳೆ ಕೃಷಿಕ ಅಶೋಕ ಪ್ರಭು, ಶ್ರೀಭಾರತಿ ಎಣ್ಣೆ ತಾಳೆ ಬೆಳೆಗಾರರಸಹಕಾರಿ ಸಂಘದ ನಿರ್ದೇಶಕ ಪದ್ಮನಾಭ ಭಟ್ ಕೊಂಕೋಡಿ ಹಂಚಿಕೊಂಡರು.
ಅದರ ನಂತರ 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಉಡುಪಿ ಜಿಲ್ಲೆ ಮತ್ತು ಮಂಗಳೂರು ಜಿಲ್ಲೆಯ ವ್ಯವಸ್ಥಾಪಕರು ಆದ ಕೃಷ್ಣ ವೈಟಿ ಅವರು ಎಣ್ಣೆ ತಾಳೆ ಕೃಷಿ ಮಾಡುವ ಬಗ್ಗೆ ಮಾಹಿತಿಯನ್ನು ಮತ್ತು 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ದೃಷ್ಟಿಕೋನ, ಮಿಷನ್ ಮತ್ತು ಏರಿಯಾ ಮ್ಯಾನೇಜರ್ ಕೆಲಸ, ಕ್ಲಸ್ಟರ್ ಅಧಿಕಾರಿ ಕೆಲಸದ ಬಗ್ಗೆ ಹಾಗೂ ತಾಳೆ ಬೆಳೆ ಪ್ರಸ್ತುತ ಸ್ಥಿತಿ ಗತಿ, ಆರ್ಥಿಕತೆ ಮತ್ತು ಬೇಸಾಯ ತಾಂತ್ರಿಕತೆ ಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಅಳಿಕೆ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ಭಾಸ್ಕರ ಮಡಿಯಾಲ, ಕಂಪು ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್, ಮಾಣಿ ಮೂಲೆ ಗೋವಿಂದ ಭಟ್, ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಜೋ ಪ್ರದೀಪ್ ಡಿಸೋಜ , ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ,3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಉಡುಪಿ ಜಿಲ್ಲೆ ಮತ್ತು ಮಂಗಳೂರು ಜಿಲ್ಲೆಯ
ವ್ಯವಸ್ಥಾಪಕರು ಆದ ಕೃಷ್ಣ ವೈಟಿ , 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕ್ಲಸ್ಟರ್ ಅಧಿಕಾರಿ ರಾಬರ್ಟ್ ಡಿಸೋಜ ಉಪಸ್ಥಿತಿ ಇದ್ದರು ಹಾಗೂ ಕಂಪು ಕಚೇರಿ ಮೇಲ್ವಿಚಾರಕ ನಾಗರಾಜ್ ಎಲ್ಲರಿಗೂ ವಂದಿಸಿದರು..

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top