ಬೆಳ್ಳಾರೆಯ ಐತಿಹಾಸಿಕ ಸ್ಥಳ “ಬಂಗ್ಲೆ ಗುಡ್ಡೆ ” ಅರೆಭಾಷೆ ಅಕಾಡೆಮಿ ಅಧ್ಯಕ್ಷರಿಂದ ವೀಕ್ಷಣೆ .

ಬೆಳ್ಳಾರೆಯ ಐತಿಹಾಸಿಕ ಸ್ಥಳವಾದ ಬಂಗ್ಲೆ ಗುಡ್ಡೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚಾರಿತ್ರಿಕ ಹಿನ್ನಲೆಯುಳ್ಳ ಈ ಸ್ಥಳವು ಸರ್ವೆ ನಂಬರ್ 197/2A ಯಲ್ಲಿ 0.93 ಎಕ್ರೆ ಸ್ಥಳವಿದ್ದು ಎರಡು ಬಂಗ್ಲೆ ಕಟ್ಟಡಗಳನ್ನು ಹೊಂದಿರುತ್ತದೆ.ಈ ಸ್ಥಳಕ್ಕೆ ಆವರಣವಿಲ್ಲದೆ ಪೂರ್ತಿ ಪೊದೆಗಳಿಂದ ಕೂಡಿರುತ್ತದೆ.ಇದರಲ್ಲಿರುವ ಒಂದು ಕಟ್ಟಡವನ್ನು ದುರಸ್ತಿಗೊಳಿಸಲು ಸರ್ಕಾರದಿಂದ ರೂ.10 ಲಕ್ಷ ಅನುದಾನವು ಬಿಡುಗಡೆಗೊಂಡಿರುತ್ತದೆ. ಈ ಹಣದಿಂದ ಪ್ರಾರಂಭಗೊಂಡ ದುರಸ್ತಿ ಕಾರ್ಯಗಳು ಇದೀಗ ಸ್ಥಗಿತಗೊಂಡಿದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಸಂಬಂಧ ಮಾಹಿತಿಯನ್ನು ಪಡೆದುಕೊಂಡರು ಮತ್ತು ಶೀಘ್ರ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಸೂಚಿಸಿದರು. ಇಲ್ಲಿಯ ಚರಿತ್ರೆಯನ್ನು ಉಳಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ “ಅಮರ ಸುಳ್ಯ ಸಮರ” ಸಮಿತಿಯ ತಾಲೂಕು ಅಧ್ಯಕ್ಷರಾದ ಚಂದ್ರ ಕೋಲ್ಚ ರ್ ರವರು ಜೊತೆಯಲ್ಲಿದ್ದು ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸ್ಥಳೀಯ ಜನಪ್ರತಿನಿಧಿಗಳ ಸಂಘ ಸಂಸ್ಥೆಯವರ, ಮತ್ತು ಈ ಭಾಗದ ಪ್ರಮುಖರ ಸಭೆ ಕರೆದು ಧ್ವಜರೋಹಣ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಪ್ರಮುಖರಾದ ಕೂಸಪ್ಪ ಗೌಡ ಮುಗುಪ್ಪು, ಮಾಧವ ತಡಗಜೆ, ರವೀಂದ್ರ ಮರಕ್ಕಡ, ಆನಂದ ಬೆಳ್ಳಾರೆ ,ಜಯರಾಮ ಉಮಿಕ್ಕಳ, ನ್ಯಾಯವಾದಿ ಮಹಾಬಲ ಗೌಡ, ಮೋನಪ್ಪ ತಂಬ್ಬಿನಮಕ್ಕಿ ,ತಿಮ್ಮಪ್ಪ ಗೌಡ ಕಾಯರ ,ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top