ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ ನಡೆಯಿತು ಕುಡಿಯುವ ನೀರಿನ ಯೋಜನೆ ಜಾರಿ ಬಳಕೆ ಕುರಿತು ಮಾಹಿತಿ ಹಾಗೂ ಮೀಟರ್ ಆಧಾರದಲ್ಲಿ ಎಷ್ಟು ನೀರನ್ನು ಪ್ರತಿ ಮನೆಗೆ ತಲುಪಿಸುವ ಬಗ್ಗೆ ಸುರೇಶ್ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರಾರದ ಚೈತ್ರಾ ಮಾಹಿತಿ ನೀಡಿದರು ಪಂಚಾಯತ್ ಅಬಿವೃದಿ ಆಧಿಕಾರಿ ಸರಿತಾ ಡಿಸೋಜಾ ಕುಡಿಯುವ ಬಳಕೆಯ ಬಗ್ಗೆ ಸರಕಾರ ನಿಗದಿ ಪಡಿಸಿದ ದರ ಹಾಗೂ ಪಾವತಿಸಬೇಕಾದ ದರದ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಸಾರ್ವಜನಿಕರು ಚರ್ಚೆ ನಡೆಸಿದರು. ಹಾಳಾದ ಮೀಟರ್ ಸರಿಪಡಿಸುವ ಬಗ್ಗೆ. ಕೆಲವು ಕಡೆಗಳಲ್ಲಿ ಮೀಟರ್ ಬ್ಲಾಕ್ ಆಗಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು ಹಾಗೂ ಹಣ ಕಟ್ಟಡವರ ಸಂಪರ್ಕ ಕಟ್ ಮಾಡಲು ಸಭೆಯಲ್ಲಿ ಪ್ರಸ್ತಾಪ ಆಯ್ತು.
ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಶ್ರೀಮತಿ ಸುಂದರಿ ವಿಮಲಾ ಪ್ರಸಾದ್, ಸುಶೀಲಾ ಲಿಸ್ಸಿ ಮೊನಾಲಿಸಾ, ಕುಡಿಯುವ ನೀರಿನ ಸಮಿತಿಯ ನಾಗೇಶ ಪಿ. ಆರ್, ಪುಷ್ಪರಾಜ್ ರೈ ಉಪಸ್ತಿತರಿದ್ದರು ಕುಡಿಯುವ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ವಂದಿಸಿದರು ಪಂಚಾಯತ್ ಸಿಬ್ಬಂದಿ ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು
ಸಂಪಾಜೆ : ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ

















