ಪತಿ ತನ್ನ ಪತ್ನಿಗೆ ಚೂರಿಯಿಂದ ಇರಿದು
ಕೊಲೆ ಮಾಡಿದ ಘಟನೆ ಜು.17ರ ಗುರುವಾರ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಸಮೀಪದ ಬಾಜಾರು ಎಂಬಲ್ಲಿ ನಡೆದಿದೆ.
ಬಾಜಾರು ನಿವಾಸಿ ಝೀನತ್ (41) ಮೃತ ಮಹಿಳೆ. ಪತಿ ರಫೀಕ್ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.
ಮುಂಜಾನೆ ಬೆಳಗ್ಗೆ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪತ್ನಿಗೆ ರಫೀಕ್ ಚೂರಿಯಿಂದ ಇರಿದು ಹತ್ಯೆ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಚೂರಿಯಿಂದ ಇರಿದು ಪತ್ನಿಯ ಕೊಲೆ ಮಾಡಿದ ಪತಿ

















