ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯವರಿಂದ ಕಾಮಗಾರಿ ಪರಿಶೀಲನೆ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ವೀಕ್ಷಣೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ನರವಾಡೆ ವಿನಾಯಕ್ ಕಾರ್ಬಾರಿ ಐ. ಎ .ಎಸ್ ಬೇಟಿ ನೀಡಿ ಗೂನಡ್ಕ ಕುಡಿಯುವ ನೀರಿನ ಟ್ಯಾಂಕ್, ಕುಡಿಯುವ ನೀರಿನ ಮೀಟರ್ ಮೀಟರ್ ಇರುವ ಸ್ಥಳ ಪರಿಶೀಲನೆ ನಡೆಸಿ. ಮೀಟರ್ ದರದಲ್ಲಿ 24 ಗಂಟೆಗಳ ನೀರು ಪೂರೈಕೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಕುಡಿಯುವ ನೀರಿನ ಮೀಟರ್ ಮೂಲಕ ದರ ನಿಗದಿ ಮಾಡುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಬದಲ್ಲಿ ಜಿಲ್ಲಾ ಪಂಚಾಯತ್ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯ ಪಾಲಕ ಇಂಜಿನಿಯರ್ ರಘು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ರಾಜಣ್ಣ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ, ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಕುಡಿಯುವ ನೀರು ವಿಭಾಗದ ಸಹಾಯಕ ಅಭಿಯಂತರರು ಶ್ರೀಮತಿ ಚೈತ್ರಾ, ಇಂಜಿನಿಯರ್ ವಿಭಾಗದ ಮಣಿಕಂಠ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಧ ಜಿ ಕೆ ಹಮೀದ್ ಗೂನಡ್ಕ ಸುಂದರಿ ಮುಂಡಡ್ಕ,ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ,ಅಬುಸಾಲಿ, ಪಂಚಾಯತ್ ಅಬಿವೃದಿ ಆಧಿಕಾರಿ ಸರಿತಾ ಡಿಸೋಜಾ,ಪ್ರಶಾಂತ್ ವಿ. ವಿ ಬಾಲಚಂದ್ರ, ಶರತ್ ಹಾಗೂ ಫಲಾನುಭವಿ ಅಬ್ಬಾಸ್ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಬಾವಿ ಹೂಳೆತ್ತುವ ಬಗ್ಗೆ. ಗ್ರಾಮ ಮಟ್ಟದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಅನುಧಾನ ಒದಗಿಸುವ ಬಗ್ಗೆ ವಿನಂತಿ ಮಾಡಲಾಯಿತು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top