ಅರಂತೋಡು : ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಯನಾಡು ಎಂಬಲ್ಲಿ ಶುಕ್ರವಾರ ನಡೆದಿದೆ.
ಅಪಘಾತಕ್ಕೊಳಗಾದ ಕಾರು ಕೊಡಗು ಜಿಲ್ಲೆ ಗೋಣಿಕೊಪ್ಪದಾಗಿದ್ದು,ಮೃತರನ್ನು ರಹಮತುಲ್ಲಾರ ಪುತ್ರನಿಹಾದ್, ಅಜೀಜ್ ರವರ ಪುತ್ರ ರಿಷಾನ್, ಬಾಬು ರವರ ಪುತ್ರರಾಶಿಬ್ ಹಾಗೂ ನಜೀರ್ ರವರ ಪುತ್ರ ಅನೀಶ್ ಎಂದು ತಿಳಿದು ಬಂದಿದೆ.
ಈ ನಾಲ್ವರು ಗೋಣಿಕೊಪ್ಪದಿಂದ ಉಳ್ಳಾಲಕ್ಕೆ ತೆರಳುತ್ತಿದ್ದರು. ಅತಿಯಾದ ವೇಗ ಅಪಘಾತಕ್ಕೆ ಕಾರಣವೆಂದು ಅಂದಾಜಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಛಿದ್ರಗೊಂಡಿದ್ದು, ದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡುವಂತಾಯಿತು. ಲಾರಿ ಕೂಡ ಜಖಂ ಗೊಂಡಿದೆ.
ಈ ಸಂದರ್ಭ ತಕ್ಷಣ ಸ್ಪಂಧಿಸಿದ ಆಂಬುಲೆನ್ಸ್ ಚಾಲಕರು ತಮ್ಮ ಅಂಬ್ಯುಲೆನ್ಸ್ ಮೂಲಕ ಮೃತ ದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದರು. ಆದರೆ ಇಲ್ಲಿ ಪೋಸ್ಟ್ ಮಾರ್ಟಂ ಸಿಬ್ಬಂದಿಗಳು ರಜೆಯಲ್ಲಿ ಇರುವುದರಿಂದ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗುವುದೆಂದು ತಿಳಿದುಬಂದಿದೆ. ಮೃತ ದೇಹಗಳನ್ನು ಅಂಬ್ಯುಲೆನ್ಸ್ ಮೂಲಕ ಮಡಿಕೇರಿ ಗೆ ಕೊಂಡೊಯ್ಯಲಾಯಿತು.
ಕೊಯನಾಡು : ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಯುವಕರ ಗುರುತು ಪತ್ತೆ



































