ಕಲ್ಚೆರ್ಪೆ : ತ್ಯಾಜ್ಯ ವಿಲೇವಾರಿ ಘಟಕ್ಕೆ ಪೊನ್ನಣ್ಣ ಭೇಟಿ,ಪರಿಶೀಲನೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರ ಕಾನೂನು ಸಲಹೆಗಾರ ಪೊನ್ನಣ್ಣರವರು ಸ್ಥಳೀಯರ ಮನವಿ ಮೇರೆಗೆ ಶನಿವಾರ ಕಲ್ಬರ್ಪೆ ಕಸ ವಿಲೆವಾರಿ ಬರ್ನಿಂಗ್ ಸೆಂಟರ್ ಘಟಕಕ್ಕೆ ಭೇಟಿ ನೀಡಿ ಪರಿಸರ ವೀಕ್ಷಣೆ ಮಾಡಿದ್ದಾರೆ.
ಕಲ್ಬರ್ಪೆ ಹೋರಾಟ ಸಮಿತಿಯ ಸದಸ್ಯ ಅಶೋಕ್ ಪೀಚೆ ಅವರ ಮನವಿ ಮೇರೆಗೆ ಶಾಸಕರು ಆಟೋರಿಕ್ಷಾದಲ್ಲಿಯೇ ಸ್ಥಳ ಕ್ಕೆ ತೆರಳಿ ಘಟಕವನ್ನು ವೀಕ್ಷಣೆ ಮಾಡಿದ್ದಾರೆ.
ಬಳಿಕ ಮಾತಾಡಿದ ಅವರು ಯಾವುದೇ ಕಾರಣಕ್ಕೂ ಕಸದೊಂದಿಗೆ ಇರುವ ಪ್ಲಾಸ್ಟಿಕ್ ಗಳನ್ನು ಬೆಂಕಿಯಿಂದ ಉರಿಸುವು ದು ಸರಿಯಲ್ಲ. ಇದರಿಂದ ಇಡೀ ಪರಿಸರ ಮಲಿನವಾಗುತ್ತದೆ. ಸ್ಥಳೀಯರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಆ ಪ್ರಕ್ರಿಯೆಯನ್ನು ಮಾಡಬಾರದು ಎಂದು ಸ್ಥಳದಲ್ಲಿದ್ದ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
ಬಳಿಕ ಸ್ಥಳಿಯರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಲ್ಲಿಯೂ ಮಾತನಾಡುವುದಾಗಿ ಭರವಸೆ ನೀಡಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top