ಆನೆ ದಾಳಿಗೆ ಕಾಫಿನಾಡಲ್ಲಿ ಮತ್ತೊಂದು ಬಲಿಯಾಗಿದೆ. 4 ದಿನದ ಅಂತರದಲ್ಲಿ ಇದು 2ನೇ ಸಾವು ಇದಾಗಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದ ಬಳಿ ಕಾಡಾನೆ ದಾಳಿಯಾಗಿದೆ. ಸುಬ್ರಾಯ ಗೌಡ (65) ಮೃತ ದುರ್ದೈವಿ.
ಕಳೆದ ಗುರುವಾರವಾಷ್ಟೆ 25 ವರ್ಷದ ಯುವತಿ ಅನಿತಾ ಎಂಬವರು ಕಾಡಾನೆಗೆ ದಾಳಿಗೆ ಬಲಿಯಾಗಿದ್ದರು. ಆನೆ ದಾಳಿಗೆ ಸಾವನ್ನಪ್ಪಿದ್ದರು. ನಿನ್ನೆ ಇಂದು ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಆನೆಗಳು ಕಾಣಿಸಿಕೊಂಡಿದ್ದವು.ಮೇಲಿಂದ ಮೇಲೆ ಆನೆ ದಾಳಿ ಪ್ರಕರಣ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ. ಇನ್ನು ಇಂದು ಕಾಡಾನೆ ದಾಳಿಗೆ ನಿರಂತರ ದಾಳಿಯಾಗುತ್ತಿರೋದನ್ನು ಖಂಡಿಸಿ ಇಂದು ಬಾಳೆಹೊನ್ನೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅರಣ್ಯ ಸಚಿವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕಾಡಾನೆ ದಾಳಿಗೆ ಮತ್ತೊಂದು ಬಲಿ

















