ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ ಸೋಮವಾರ ಮತ್ತೆ ಬೆಳಗಿನ ಜಾವ ಸುಮಾರು 4ಗಂಟೆಗೆ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿಯಲ್ಲಿ ವಾಹನಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ಗುತ್ತಿಗೆದಾರರ ನಿರ್ಲಕ್ಷದಿಂದ ಇದು ನಾಲ್ಕನೇ ಬಾರಿ ರಸ್ತೆ ಹೆದ್ದಾರಿ ಸಂಪೂರ್ಣ ಬಂದ್ ಆಗುತ್ತಿದ್ದು ಮಣ್ಣು ಬಿದ್ದ ಕ್ಷಣ ಮಣ್ಣನ್ನು ತಿರವುಗೊಳಿಸುವುದು ಬಿಟ್ಟರೆ ಮಣ್ಣು ಬೀಳದಂತೆ ವೈಜ್ಞಾನಿಕ ರೀತಿಯಲ್ಲಿ ಯಾವುದೇ ರೀತಿಯಾದ ಶಾಶ್ವತ ಪರಿಹಾರವನ್ನು ಗುತ್ತಿಗೆದಾರರು ವಹಿಸದೇ ಇದ್ದರೂ ಅಧಿಕಾರಿ ವರ್ಗದವರು ಅವರ ಮೇಲೆ ಯಾವುದೇ ರೀತಿಯಾದ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರ ಹಿತಾಶಕ್ತಿಗೆ ಪ್ರತಿಭಟನೆ, ರಸ್ತೆ ನಡೆಸಿದಲ್ಲಿ ಅಧಿಕಾರಿಗಳು ಸ್ವಪ್ರೇರಿತವಾಗಿ ಸಾರ್ವಜನಿಕರ ಮೇಲೆ ಬಂಧಿಸುವ ಕೆಲಸಕ್ಕೆ ಕೈ ಹಾಕುತ್ತಾರೆ ಆದರೆ ಹಲವು ಬಾರಿ ಗುಡ್ಡ ಕುಸಿದು ಹೆದ್ದಾರಿ ಆಗುತ್ತಿದ್ದರು ಯಾಕೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ನೆಲ್ಯಾಡಿ ಸಮೀಪ ಗುಡ್ಡ ಕುಸಿದು ಬಂದ್



































