ಗೌಡರ ಯುವ ಸೇವಾ ಸಂಘ ಸುಳ್ಯ, ತಾಲೂಕು ಗೌಡ ಮಹಿಳಾ ಘಟಕ ಸುಳ್ಯ ಇದರ ಆಶ್ರಯದಲ್ಲಿ ಮಹಿಳಾ ಘಟಕದ “ವರ್ಷ ಸಂಭ್ರಮ” ಕಾರ್ಯಕ್ರಮ ಸಾಂದೀಪ್ ವಿಶೇಷ ಶಾಲೆಯಲ್ಲಿ ಜು.28 ರಂದು ನಡೆಯಿತು.
ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ವಿನುತಾ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಡಾ.ಸಾಯಿಗೀತ ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್.ಗಂಗಾಧರ್, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷರಾದ ಪಿ.ಸಿ ಜಯರಾಮ, ರಾಜ್ಯಮಟ್ಟದ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಚಂದ್ರ ಕೋಲ್ಟಾರು, ಎಂ.ಬಿ. ಪೌಂಡೇಶನ್ ನ ಸಂಚಾಲಕರಾದ ಎಂ.ಬಿ.ಸದಾಶಿವ, ಸಾಂದೀಪ್ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಹರಿಣಿ ಸದಾಶಿವ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕೆ.ಸಿ.ಸದಾನಂದ, ಗೌಡರ ಯುವ ಸೇವಾ ಸಂಘದ ಗೌರವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ತರುಣ ಘಟಕದ ಅಧ್ಯಕ್ಷರಾದ ಪ್ರೀತಂ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಆಸ್ತಿಕ್ ರಾಘವ್ ಬಾಳಿಕಳ ರವರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಂದೀಪ್ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಚೇತನ ಮಕ್ಕಳ ಬಾಳಿನಲ್ಲಿ ಬೆಳಕಾದ ಸಾಂದೀಪ್ ಶಾಲೆಯ ಸಂಚಾಲಕರಾದ ಎಂ.ಬಿ.ಸದಾಶಿವ ದಂಪತಿಗಳನ್ನು ಸನ್ಮಾನಿಸಲಾಯಿತು.
ಬಿ.ಆರ್.ಸಿಯಲ್ಲಿ ಆಪ್ತ ಸಮಲೋಚಕರಾಗಿ ನೇಮಕವಾದ ಕೃಪಾ ದಿನೇಶ್ ಪಿಂಗಾರತೋಟ ಅವರನ್ನು ಗೌರವಿಸಲಾಯಿತು. ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಾಂದೀಪ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ತಾ.ಮಹಿಳಾ ಘಟಕದ ಭಾರತಿ ಪುರುಷೋತ್ತಮ ಉಳುವಾರು ಸ್ವಾಗತಿಸಿದರು.
ಮಹಿಳಾ ಘಟಕದ ಉಪಾಧ್ಯಕ್ಷರಾದ ಜಯಶ್ರೀ ನಾರ್ಕೊಡು ವಂದಿಸಿದರು.
ಸವಿತಾ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ : ಗೌಡರ ಯುವ ಸೇವಾ ಸಂಘ,ಮಹಿಳಾ ಘಟಕದಿಂದ ಸಾಂಧೀಪ್ ಶಾಲೆಯಲ್ಲಿ ವರ್ಷ ಸಂಭ್ರಮ ಕಾರ್ಯಕ್ರಮ

















