ಸ್ಪಂದನ ಗೆಳೆಯರ ಬಳಗ(ರಿ) ಅಡ್ತಲೆ ಇವರ ಆಶ್ರಯದಲ್ಲಿ ಆ.17ರಂದು ಆದಿತ್ಯವಾರ ಅಡ್ತಲೆ ಶಾಲಾ ವಠಾರದಲ್ಲಿ 7 ನೇ ವರ್ಷದ ಶ್ರೀನಾಥ್ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ ಸ್ಪರ್ಧೆಯು ನಡೆಯಲಿದೆ ಸಂಘಟಕರು ತಿಳಿಸಿದ್ದಾರೆ. ಪುಟಾಣಿಗಳಿಗೆ,ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ , ಹಿರಿಯ ನಾಗರಿಕರಿಗೆ ವಿವಿದ ಕ್ರೀಡಾ ಹಾಗೂ ಮನರಂಜನಾ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮವನ್ನು ಅಡ್ತಲೆ- ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ಸ್ಥಾನದ ಅಧ್ಯಕ್ಷರಾದ ಶ್ರೀ ಸದಾನಂದ ಅಡ್ತಲೆ ಉದ್ಘಾಟಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ವಿನಯ್ ಬೆದ್ರುಪಣೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ, ಸದಸ್ಯರಾದ ಶ್ರೀಮತಿ ಸುಜಯಾ ಲೋಹಿತ್ ಮೇಲಡ್ತಲೆ, ಅಡ್ತಲೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಮುಕುಂದ ಡಿ. , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಭವಾನಿಶಂಕರ ಅಡ್ತಲೆ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಶ್ರೀ ಸುಬ್ರಮಣಿ ಕಲ್ಲುಗುಂಡಿ, ಮಾಜಿ ಸೈನಿಕರಾದ ಶ್ರೀ ಮಹೇಶ್ ದೀಟಿಗೆ, ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ಉಳುವಾರು, ಅಡ್ತಲೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಹಿತ್ ಮೇಲಡ್ತಲೆ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಅಡ್ತಲೆ, ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ದಿನೇಶ್ ಅರಮನೆಗಯ ಇವರುಗಳು ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಯನ್ನು ಮಾಡಿರುವ ಶ್ರೀ ಪವನ್ ಪಿಂಡಿಮನೆ , ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯನ್ನು ಮಾಡಿರುವ ಕು.ದೀಪ್ತಿ ಕೆ.ಸಿ., ಶೈಕ್ಷಣಿಕ ಸಾಧನೆಯನ್ನು ಮಾಡಿರುವ ಕು.ಜ್ಯೋತಿ ಬೆದ್ರುಪಣೆ , ಸಾಮಾಜಿಕ ಸೇವೆಗೆ ಶ್ರೀ ಲಿಂಗರಾಜ್ ಮೇಲಡ್ತಲೆ , ಶೈಕ್ಷಣಿಕ , ಸಾಂಸ್ಕೃತಿಕ ಹಾಗೂ ಕಲಾ ಸಾಧಕಿ ಕು.ಉಜನಾ ಕಾಯರ , ಸಾಮಾಜಿಕ ಹಿರಿಯ ಸಾಧಕಿ ಶ್ರೀಮತಿ ಜಾನಕಿ ಅಡ್ತಲೆ ಮುಂತಾದ ಊರಿನ ಆರು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇರಲಿದೆ.
ಈ ಬಾರಿ ವಿಶೇಷವಾಗಿ 1 ರಿಂದ 3 ವರ್ಷ ಹಾಗೂ 3 ರಿಂದ 6 ವರ್ಷ ವಿಭಾಗದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ
ಆ. 17ಕ್ಕೆ ಅಡ್ತಲೆಯಲ್ಲಿ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ ಸ್ಪರ್ಧೆ

















