ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರಬಳಗ (ರಿ.) ಕಾಯರ್ತೋಡಿ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ದಿನಾಂಕ 15.08.2025 ನೇ ಶುಕ್ರವಾರದಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಜರಗಿತು.
ಕಾಯರ್ತೋಡಿ ದೇವಳದ ಪ್ರಧಾನ ಅರ್ಚಕರಾಗಿರುವ ಶ್ರೀ ನೀಲಕಂಠ ಭಟ್ ರವರಿಂದ ಉದ್ಘಾಟನೆಗೊಂಡಿದ್ದ ಕಾರ್ಯಕ್ರಮದಲ್ಲಿ
ಮುದ್ದುಕೃಷ್ಣ ಸ್ಪರ್ಧೆ, ಭಕ್ತಿಗೀತೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಚೆನ್ನೆಮಣೆ ಸ್ಪರ್ಧೆ ಮೊದಲಾದ ಮನೋರಂಜನಾ ಸ್ಪರ್ಧೆಗಳು ಜರಗಿದವು.
ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಹಿಂದೂ ಏಕನಾಮಿಕ್ ಫಾರ್ಮ್ ಸುಳ್ಯ ಇದರ ಅಧ್ಯಕ್ಷರಾಗಿರುವ ಶರತ್ ಪರಿವಾರಕಾನ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸುಳ್ಯ ಇದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿರುವ ಶ್ರೀಮತಿ ಚೈತ್ರ ಎಸ್ ಆರ್ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತಿನ ಅಧ್ಯಕ್ಷರಾಗಿರುವ ಶ್ರೀಮತಿ ಶಶಿಕಲಾ ನೀರಬಿದಿರೆ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ಎಂ ವೆಂಕಪ್ಪ ಗೌಡ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಿತ್ರ ಬಳಗದ ಪೂರ್ವಾಧ್ಯಕ್ಷ ಭವಾನಿ ಪ್ರಸಾದ್ ಎನ್ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಮಿತ್ರ ಬಳಗದ ಅಧ್ಯಕ್ಷರಾಗಿರುವ ಸಂದೇಶ ಎಸ್ ಇವರು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು.
ಪೂರ್ವಾಧ್ಯಕ್ಷ ದೀಪಕ್ ಕೆ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಮಿತ್ರ ಬಳಗದ ಪೂರ್ವಾಧ್ಯಕ್ಷ ದೇವಿ ಪ್ರಸಾದ ಎ ಸ್ವಾಗತಿಸಿ, ಪೂರ್ವಾಧ್ಯಕ್ಷ ಚಿದಾನಂದ ಕುದ್ಪಾಜೆ ವಂದಿಸಿದರು. ಪೂರ್ವಾಧ್ಯಕ್ಷ ದೇವಿಪ್ರಸಾದ ಜಿ ಸಿ ಕಾಯರ್ತೋಡಿ ನಿರೂಪಿಸಿದರು.



































