ಅಳಿವಿನಂಚಿನಲ್ಲಿರುವ ಗ್ರಾಮೀಣ ಆಟಗಳನ್ನು ಉಳಿಸಿ ಬೆಳೆಸುವುದು ಶ್ರೇಷ್ಠ ಕೆಲಸ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಹೇಳಿದರು.
ಸಿ. ಸಿ ಆರ್. ಟಿ. ಬಳಗ ಸುಳ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸುಳ್ಯ, ಹಾಗೂ ಸರಕಾರಿ ಪ್ರೌಢ ಶಾಲೆ ಎಲಿ ಮಲೆ ಇವರ ಸಹಯೋಗದಲ್ಲಿ, ಸುಳ್ಯ ತಾಲ್ಲೂಕು ಮಟ್ಟದ ಚೆನ್ನೆ ಮ ಣೆ ಸ್ಪರ್ಧೆಯನ್ನು ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ಆ.16ರಂದು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್. ಡಿ. ಎಮ್. ಸಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಸಿ.ಸಿ.ಆರ್.ಟಿ ಅಧ್ಯಕ್ಷ ಶಿಕ್ಷಕ ಚಿನ್ನಪ್ಪ ಗೌಡ ಪತ್ತುಕುಂಜ ಇವರು ಪ್ರಾಸ್ತಾವಿಕ ವಾಗಿ ಮಾತನಾಡಿ.ಸಿ.ಸಿ.ಆರ್.ಟಿ ಬಳಗ ಉತ್ತಮ ಕೆಲಸ ಮಾಡುತ್ತಿದೆ . ನಮ್ಮ ಬಳಗ ಅಂತರ್ ರಾಜ್ಯ ಸಾಂಸ್ಕ್ರತಿಕ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಇದು ಅಂತರ್ ರಾಜ್ಯ ಸಂಬಂಧ ಬೆಸೆಯಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು. ಕಾರ್ಯದರ್ಶಿ ನಿವ್ರತ್ತ ಶಿಕ್ಷಣ ಸಂಯೋಜಕ ಕೇಶವ, , ಪ್ರಾ. ಶಾ. ಶಿ.. ಸಂಘದ ಅಧ್ಯಕ್ಷ ಶ್ರೀಧರ, ಹಿರಿಯ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ರಾಜೇಶ್ ಅಂಬೆಕಲ್ಕು, ಮುಖ್ಯ ಶಿಕ್ಷಕಿ ಸಂಧ್ಯಾ ಉಪಸ್ಥಿತ ರಿದ್ದರು. ಸಹ ಶಿಕ್ಷಕ ಮುರಳಿಧರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಉದಯ್ ಕುಮಾರ್ ನಾರಾಯಣ. ಮೋಹನ, ಗದಾಧರ್ ಸ್ಕೌಟ್ ಗೈಡ್ಸ್ ವಿದ್ಯಾರ್ಥಿ ಗಳು ಸಹಕರಿಸಿದರು.
ಅಳಿವಿನಂಚಿನಲ್ಲಿರುವ ಗ್ರಾಮೀಣ ಆಟಗಳನ್ನು ಉಳಿಸಿ ಬೆಳೆಸುವುದು ಶ್ರೇಷ್ಠ ಕೆಲಸ : ಚಂದ್ರಶೇಖರ ಪೇರಾಲ್

















