ಗೂನಡ್ಕ : ಸೆ.21ಕ್ಕೆ ಬೃಹತ್ ಮಿಲಾದ್ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸೆಪ್ಟೆಂಬರ್ 21.2025 ಆದಿತ್ಯವಾರ ಸಜ್ಜನ ಸಮುದಾಯ ಭವನದಲ್ಲಿ 6 ಜಮಾಯತ್ ನೇತೃತ್ವದಲ್ಲಿ ಬೃಹತ್ ಮಿಲಾದ್ ಸಂಗಮ ಹಾಗೂ 6 ಜಮಾಯತ್ ವ್ಯಾಪ್ತಿಯಲ್ಲಿ ಮದ್ರಸಾ ಹಾಗೂ ಇತರ ವಿದ್ಯಾಬ್ಯಾಸ ಕೇತ್ರದಲ್ಲಿ ಡಿಸ್ಟಿಕ್ಷನ್ ನಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲು 6 ಜಮಾಯತ್ ನೇತೃತ್ವದಲ್ಲಿ ಆ.17ರಂದು ಗೂನಡ್ಕದ ಸಜ್ಜನ ಸಭಾಭವನದಲ್ಲಿ ಸೇರಿ ತೀರ್ಮಾನಿಸಲಾಯಿತು
ಸಭೆಯಲ್ಲಿ ಕಾರ್ಯಕ್ರಮದ ಉಸ್ತುವಾರಿ ಹಾಗೂ 50 ಜನರ ಸ್ವಾಗತ ಸಮಿತಿ ರಚಿಸಲಾಯಿತು ಸಂಚಾಲಕರಾಗಿ ಅರಂತೋಡು ಜಮಾಯತ್ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷರಾದ ಟಿ ಎಂ. ಶಾಹಿದ್ ತೆಕ್ಕಿಲ್. ಗೂನಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಜಿ.ಮಹಮದ್ ಕುಂಞಿ ಗೂನಡ್ಕ, ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಎಸ್ ಆಲಿ ಹಾಜಿ. ಸಂಪಾಜೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮದ್ ಹಮೀದಿಯ. ಕೊಯ್ನಾಡ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಮೊಯ್ದೀನ್ ಕುಂಞಿ ಯವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮದ ಸಂಯೋಜಕರಾಗಿ ಹಾಜಿ ಅಶ್ರಫ್ ಸಂಟ್ಯಾರ್, ಡಾ . ಉಮ್ಮರ್ ಬೀಜದಕಟ್ಟೆ. ಜಿ ಕೆ ಹಮೀದ್ ಗೂನಡ್ಕ ರವರನ್ನು ನೇಮಕ ಮಾಡಲಾಯಿತು
ಸಹ ಸಂಚಾಲಕರನ್ನಾಗಿ. ತಾಜ್ ಮಹಮದ್, ಕೆ.ಎಂ. ರಫೀಕ್. ಮಹಮದ್ ರಫೀಕ್ ಕರಾವಳಿ.
ಎ . ಟಿ. ಅಶ್ರಫ್ ಗೂನಡ್ಕ. ಎಸ್ ಎಂ. ಅಬ್ದುಲ್ಲ ಗೂನಡ್ಕ, ಸಾದಿಕ್ ಗೂನಡ್ಕ ಉಸ್ಮಾನ್ ಪೇರಡ್ಕ , ಅಬ್ದುಲ್ ಖಾದರ್ ಮೊಟ್ಟಂಗಾರ . ಟಿ ಬಿ. ಹನೀಫ್ಅ ಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಟೇಲ್, ತಾಜುದ್ದೀನ್ ಅರಂತೋಡು,.
ಎಸ್ ಕೆ ಹನೀಫ್ ಸಂಪಾಜೆ. ಎಸ್ ಪಿ. ಅಬ್ದುಲ್ ರಹಿಮಾನ್ ಸಂಪಾಜೆ. ಕೆ. ಕೆ. ಅಬ್ಬಾಸ್ ಸಂಪಾಜೆ ರವರನ್ನು ನೇಮಕ ಮಾಡಲಾಯಿತು ಸ್ವಾಗತ ಸಮಿತಿಗೆ 6 ಜಮಾಯತ್ ವ್ಯಾಪ್ತಿಯ 50 ಜನರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು
ಉಳಿದಂತೆ 6 ಜಮಾಯತ್ ವ್ಯಾಪ್ತಿಯ ಖತೀಬ್ ಉಸ್ತಾದ್, ಸದರ್ ಉಸ್ತಾದ್ ಹಾಗೂ ಜಮಾಯತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಬುಧವಾರ ಇಶಾ ನಮಾಜ್ ಬಳಿಕ ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಮದರಸ ಹಾಲ್ ನಲ್ಲಿ ನಡೆಸಲು ತೀರ್ಮಾನಿಸಲಾಯಿತು..ಹಾಗೂ ಮುಂದಿನ ಆದಿತ್ಯವಾರ ಮಗ್ರಿಬ್ ನಮಾಜ್ ಬಳಿಕ ಸಜ್ಜನ ಸಮುದಾಯ ಭವನದಲ್ಲಿ. ಸೇರಿ ಎಲ್ಲಾ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಇವತ್ತಿನ ಸಭೆಯಲ್ಲಿ ಉಮ್ಮರ್ ಬೀಜದಕಟ್ಟೆ ಬಾಗವಹಿಸಿ ಸಮಾಜದ ಯುವಕರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾದನೆ ಮಾಡಿದ್ದಾರೆ. ನಾವು ವಿದ್ಯಾರ್ಥಿಗಳನ್ನು ಹೆಚ್ಹು ಪ್ರೋತ್ಸಾಹ ಮಾಡಿದ್ದಾಗ ಅವರಿಗೆ ಇನ್ನಷ್ಟು ಹೆಚ್ಚು ಆಸಕ್ತಿ ಮೂಡುತ್ತದೆ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ಪ್ರಜೆಗಳಾಗಿ ಮಾಡೋಣ. ನಮ್ಮ ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಜಮಾಯತರು ಒಟ್ಟಾಗಿ ಕೆಲಸ ಮಾಡೋಣ ಎಂದರು. ಜಿ. ಮಹಮದ್ ಕುಂಞಿ ಗೂನಡ್ಕ ಈ ಕಾರ್ಯಕ್ರಮದಲ್ಲಿ ಎಲ್ಲರ ಭಾಗವಹಿಸುವಿಕೆ. ಮಿಲಾದ್ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ನಮ್ಮ ಸಂಪೂರ್ಣ ಸಹಕಾರ ಇದೆ. ಎಂದರು ಕಾರ್ಯಕ್ರಮದಲ್ಲಿ. ವಿವಿಧ ಜಮಾಯತ್ ವ್ಯಾಪ್ತಿಯ ಪಿ. ಕೆ. ಸಿನಾನ್. ಹ್ಯಾರಿಸ್ zam zam, ಅಲಿ ಚಟ್ಟೆಕಲ್ಲು
ಮುನೀರ್ ದರ್ಕಾಸ್, ಇಬ್ರಾಹಿಂ ದರ್ಕಾಸ್, ಉನೈಸ್ ಗೂನಡ್ಕ, ಅಲ್ತಾಫ್ ಗೂನಡ್ಕ, ಜಿ. ಎಂ. ಅಬ್ದುಲ್ಲ ಗೂನಡ್ಕ, ಶರೀಫ್ ಉದಯ ಸ್ಟೋರ್, ತಾಜ್ ಟರ್ಲಿ, ಸಾದಿಕ್ ಚಟ್ಟೆಕಲ್ಲು, ರಜಾಕ್ ಹಾಜಿ ಪಯಸ್ವಿನಿ, ಅಬೂಬಕ್ಕರ್ ಎಂ. ಸಿ. ಮೊದಲಾದವರು ಉಪಸ್ತಿತರಿದ್ದರು. ತಾಜ್ ಮಹಮ್ಮದ್ ಎಲ್ಲರನ್ನು ಸ್ವಾಗತಿಸಿ ಜಿ. ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು ಕೊನೆಯದಾಗಿ 3 ಸ್ವಲಾತಿನೊಂದಿಗೆ ಕಾರ್ಯಕ್ರಮ ಸಮಾಪ್ತಿ ಗೊಳಿಸಲಾಯಿತು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top