ಅರಂತೋಡು, ಆ. 19 : ಗ್ರಾಮೀಣ ಕ್ರೀಡೆಗಳು ಮನಸ್ಸಿಗೆ ತುಂಬಾ ಸಂತೋಷ ನೀಡುವ ಕ್ರೀಡೆಯಾಗಿದೆ.ಚೆನ್ನಮಣೆ ಸೇರಿದಂತೆ ಇತರ ಗ್ರಾಮೀಣ ಕ್ರೀಡೆಗಳನ್ನು ನಮ್ಮ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯ ಇದೆ ಎಂದು ಸಿ.ಆರ್.ಪಿ ಕುಶಾಲಪ್ಪ ಹೇಳಿದರು.
ಸಿ. ಸಿ ಆರ್. ಟಿ. ಬಳಗ ಸುಳ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸುಳ್ಯ, ಹಾಗೂ ಸರಕಾರಿ ಪ್ರೌಢ ಶಾಲೆ ಎಲಿ ಮಲೆ ಇವರ ಸಹಯೋಗದಲ್ಲಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆ.16ರಂದು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸುಳ್ಯ ತಾಲ್ಲೂಕು ಮಟ್ಟದ ಚೆನ್ನೆ ಮ ಣೆ ಸ್ಪರ್ಧೆಯ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್. ಡಿ. ಎಮ್. ಸಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಸಿ.ಸಿ.ಆರ್.ಟಿ ಅಧ್ಯಕ್ಷ ಶಿಕ್ಷಕ ಚಿನ್ನಪ್ಪ ಗೌಡ ಪತ್ತುಕುಂಜ ಕಾರ್ಯದರ್ಶಿ ನಿವ್ರತ್ತ ಶಿಕ್ಷಣ ಸಂಯೋಜಕ ಕೇಶವ, ಹಿರಿಯ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ರಾಜೇಶ್ ಅಂಬೆಕಲ್ಕು, ಮುಖ್ಯ ಶಿಕ್ಷಕಿ ಸಂಧ್ಯಾ ಉಪಸ್ಥಿತ ರಿದ್ದರು. ಸಹ ಶಿಕ್ಷಕ ಮುರಳಿಧರ ಕಾರ್ಯಕ್ರಮ ನಿರ್ವಹಿಸಿದರು. ಚೆನ್ನಮಣೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಿ ಸಿ ಆರ್ ಟಿ ಬಳಗ ಸುಳ್ಯ ಇದರ ವತಿಯಿಂದ ದಿನಾಂಕ:16-08-2025 ರಂದು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆದ ಚೆನ್ನೆಮಣೆ ಸ್ಪರ್ಧೆ 2025 ರ ಫಲಿತಾಂಶ
ಪ್ರಾಥಮಿಕ ಶಾಲಾ ವಿಭಾಗ
ಹಸುಕರು ಆಟ
ಪ್ರಥಮ ಶಾರ್ವಿ ಡಿ, ಸ. ಉ. ಹಿ. ಪ್ರಾಥಮಿಕ ಶಾಲೆ ಮುರುಳ್ಯ
ದ್ವಿತೀಯ ಗಮ್ಯ ಡಿ ವಿ, ಸ. ಉ. ಹಿ. ಪ್ರಾಥಮಿಕ ಶಾಲೆ ತೊಡಿಕಾನ
ತೃತೀಯ ಸಾತ್ವಿಕ್ ಎಚ್ ಕೆ, ಸ. ಹಿ. ಪ್ರಾಥಮಿಕ ಶಾಲೆ ವಳಲಂಬೆ
ಮೂಲೆ ಆಟ
ಪ್ರಥಮ ಸಾನ್ವಿ ಎನ್ ಎಸ್, ಸ. ಮಾ. ಹಿ. ಪ್ರಾಥಮಿಕ ಶಾಲೆ ಪಂಜ
ದ್ವಿತೀಯ ತುಷಿತ ಕೆ ಎನ್ , ಸ. ಉ. ಹಿ. ಪ್ರಾಥಮಿಕ ಶಾಲೆ ತೊಡಿಕಾನ
ತೃತೀಯ ನಂದನ್ ಡಿ, ಸ. ಉ. ಹಿ. ಪ್ರಾಥಮಿಕ ಶಾಲೆ ಮುರುಳ್ಯ
ಅರಸು ಒಕ್ಕಲು ಆಟ
ಪ್ರಥಮ ನಂದನ್ ಡಿ, ಸ. ಉ. ಹಿ. ಪ್ರಾಥಮಿಕ ಶಾಲೆ ಮುರುಳ್ಯ
ದ್ವಿತೀಯ ದೀಕ್ಷಿತ್ ಸಿ ಯು, ಸ. ಹಿ. ಪ್ರಾಥಮಿಕ ಶಾಲೆ ವಳಲಂಬೆ
ತೃತೀಯ ಗಮ್ಯ ಡಿ ವಿ, ಸ. ಉ. ಹಿ. ಪ್ರಾಥಮಿಕ ಶಾಲೆ ತೊಡಿಕಾನ
ಪ್ರೌಢಶಾಲಾ ವಿಭಾಗ
ಹಸುಕರು ಆಟ
ಪ್ರಥಮ ಶಮ್ಯ , ಸ.ಪ.ಪೂ.ಕಾಲೇಜು ಸುಳ್ಯ
ದ್ವಿತೀಯ ಪ್ರೀತಮ್ ಕೆ ಆರ್ , ಜ್ಞಾನದೀಪ ಪ್ರೌಢಶಾಲೆ ಎಲಿಮಲೆ.
ತೃತೀಯ ಯಶ್ವಿತ್ ಕೆ ಸಿ, ಸರಕಾರಿ ಪ್ರೌಢಶಾಲೆ ಎಣ್ಮೂರು
ಮೂಲೆ ಆಟ
ಪ್ರಥಮ ಪೃಥ್ವಿ ಡಿ ಎಮ್ ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ
ದ್ವಿತೀಯ ಯಶ್ವಿತ್ ಕೆ ಸಿ, ಸರಕಾರಿ ಪ್ರೌಢಶಾಲೆ ಎಣ್ಮೂರು
ತೃತೀಯ ಆತ್ಮೀಯ, ಕೆ. ಪಿ. ಎಸ್ ಬೆಳ್ಳಾರೆ
ಅರಸು ಒಕ್ಕಲು ಆಟ
ಪ್ರಥಮ ಆತ್ಮಿಕಾ, ಸ.ಪ.ಪೂ.ಕಾಲೇಜು ಸುಳ್ಯ
ದ್ವಿತೀಯ ರೇಷ್ಮಾ ಎ, ಸರಕಾರಿ ಪ್ರೌಢಶಾಲೆ ಮರ್ಕಂಜ
ತೃತೀಯ ವಂಶಿ ಎಂ, ಸರಕಾರಿ ಪ್ರೌಢಶಾಲೆ ಆಲೆಟ್ಟಿ
ಗ್ರಾಮೀಣ ಆಟಗಳು ಮನಸ್ಸಿಗೆ ಹೆಚ್ಚು ಸಂತೋಷ ನೀಡುವ ಆಟಗಳಾಗಿವೆ

















