ಸುಳ್ಯ: ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಚೇರಿ ವಿಟ್ಲ, ತಾಲೂಕು ಪಂಚಾಯತ್ ಸುಳ್ಯ, ಜಿಲ್ಲಾ ಪಂಚಾಯತ್ ಮಂಗಳೂರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕೌಶಲ್ಯ ಸಂವರ್ಧನ ಸಂಸ್ಥೆ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ತಾಲೂಕು ಪಂಚಾಯತ್ ಸುಳ್ಯದ ಮಿನಿ ಸಭಾಂಗಣದಲ್ಲಿ ಕೆ. ಇ ಜಯರಾಮ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ICAR ಗೀತೆ ಹಾಗೂ ಅನಿತಾ ಧರ್ಮಪಾಲ ಮರ್ಕಂಜ ಕೃಷಿ ಸಖಿ ಯವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು. ಕಾರ್ಯಕ್ರಮವನ್ನು ಜೆ ದಿನಕರ ಅಡಿಗ ನಿರ್ದೇಶಕರು ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಹಾಗೂ ವೇದಿಕೆಯಲ್ಲಿನ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾಕ್ಟರ್ ಅಶ್ವತಿ ಚಂದ್ರಕುಮಾರ್ ವಿಜ್ಞಾನಿಗಳು ಕೃಷಿ ವಿಸ್ತರಣಾ ವಿಭಾಗ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಮೋದ್ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಇವರು ಇಲಾಖೆಯಲ್ಲಿ ಸಿಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯ ವಿಜ್ಞಾನಿಗಳಾದ ಡಾಕ್ಟರ್ ರವಿಪ್ರಸಾದ್ ಕೀಟಶಾಸ್ತ್ರ ವಿಭಾಗದ ವಿಜ್ಞಾನಿಗಳು ಮಾತನಾಡಿ ಗೇರು ಗಿಡಗಳಿಗೆ ಬಾಧಿಸುವ ಕೀಟಗಳು ಹಾಗೂ ಅವುಗಳಿಂದ ರಕ್ಷಣೆ ಪಡೆಯುವ ರೀತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಕೆಇ ಜಯರಾಮ್ ಯೋಜನಾ ನಿರ್ದೇಶಕರು ಎನ್ ಆರ್ ಎಲ್ ಎಂ ಸಿಬ್ಬಂದಿಗಳು ನಿರ್ವಹಿಸುವ ಕೆಲಸಗಳು ಮತ್ತು ಗೇರು ಕೃಷಿಯ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ ಪ್ರಸ್ತುತ ಗೇರುಬೇಳೆ ಉತ್ತಮ ಆದಾಯವನ್ನು ತರುವಂತಹ ಬೆಳೆಯಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯ ಇದೆ ಹಾಗೂ ಮುಂದಿನ ದಿನಗಳಲ್ಲಿ ಅವರು ಕೂಡ ಗೇರು ಕೃಷಿಯನ್ನು ಮಾಡುವ ಬಗ್ಗೆ ಭರವಸೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
Dr. ದಿನಕರ ಅಡಿಗ ನಿರ್ದೇಶಕರು ಕೇಂದ್ರೀಯ ಗೇರು ಸಂಶೋಧನಾ
ನಿರ್ದೇಶನಾಲಯ ಪುತ್ತೂರು ಇವರು ಸರಕಾರದ ಯೋಜನೆಗಳನ್ನು ನೇರವಾಗಿ ರೈತರಿಗೆ ಇಲಾಖೆ ತಲುಪಿಸಲು ಸಾಧ್ಯವಿಲ್ಲ ಕೃಷಿ ಸಖಿಯರ ಮುಖಾಂತರ ಎಲ್ಲಾ ಕೃಷಿಕರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ NRLM ಸಂಜೀವಿನಿ ಸಹಕರಿಸುತ್ತಿದೆ. ಇಲಾಖೆಗಳು ಹಾಗೂ ರೈತರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೃಷಿ ಸಖಿಯರು ಇರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ಆಗಿ ಕೃಷಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯ ಇದೆ ಎಂದು ಹೇಳಿದರು. ಗೇರು ಕೃಷಿ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯ ಇದೆ ಮತ್ತು ಇದರ ಮೌಲ್ಯವರ್ಧನೆ ಮಾಡುವುದರಿಂದ ಇನ್ನಷ್ಟು ಉತ್ತಮ ಆದಾಯವನ್ನು ಗಳಿಸಲು ಸಹಕಾರಿ ಆಗಲಿದೆ. ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಕೃಷಿಕರ ಕೆಲಸವನ್ನು ಕೂಡ ಕಡಿಮೆಗೊಳಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಇದೆ ಎಂದು ತಿಳಿಸಿ ಶುಭ ಹಾರೈಸಿದರು.
ವಿನೀತ್ ಕೃಷಿ ಜೀವನೋಪಾಯ ಜಿಲ್ಲಾ ವ್ಯವಸ್ಥಾಪಕರು ಜಿಲ್ಲಾ ಪಂಚಾಯತ್ ಮಂಗಳೂರು,
ಶ್ವೇತಾ ಎನ್ ಆರ್ ಎಲ್ ಎಂ ಸಂಜೀವಿನಿ ತಾಲ್ಲೂಕು ಪಂಚಾಯತ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ
ಭಾಗ್ಯ ವಿಜ್ಞಾನಿಗಳು ತೋಟಗಾರಿಕಾ ವಿಭಾಗ(SP, MAP), ಈರದಾಸಪ್ಪ ವಿಜ್ಞಾನಿಗಳು ತಳಿ ಶಾಸ್ತ್ರ ಮತ್ತು ಸಂತಾನೋತ್ಪತ್ತಿ, Dr. ಮಂಜುನಾಥ್ ವಿಜ್ಞಾನಿಗಳು ಕೃಷಿ ಯಂತ್ರೋಪಕರಣ ವಿಭಾಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅರ್ಭನ್ ಪೂಜೇರಿ ತೋಟಗಾರಿಕಾ ಇಲಾಖೆ, ಸಂಜೀವಿನಿ ತಾಲೂಕು ಸಿಬ್ಬಂದಿಗಳಾದ ನಿಧಿ, ಜಯಲಕ್ಷ್ಮಿ, ರೂಪ, ಮೇರಿ, ಅವಿನಾಶ್ ಹಾಗೂ ತಾಲೂಕ್ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶ್ವೇತಾ ಟಿಪಿಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಸ್ವಾಗತಿಸಿದರು.
ನಿರೂಪಣೆ ಮತ್ತು ಧನ್ಯವಾದ ಸಮರ್ಪಣೆಯನ್ನು
ಮೋಹಿನಿ ವಿಶ್ವನಾಥ್ (ನಿಶಾ) ಕೃಷಿ ಸಖಿ ಸಂಪಾಜೆ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸುಳ್ಯ : ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

















