ನದಿಗೆ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ಆ.21ರಂದು ನಡೆದಿದೆ. ಮೃತ ವ್ಯಕ್ತಿ ಮುಂಡಾಜೆ ಗ್ರಾಮದ ಚೆನ್ನಿಗುಡ್ಡೆ ನಿವಾಸಿ ಪೂವಪ್ಪ ನಾಯ್ಕ ಎಂದು ಗುರುತಿಸಲಾಗಿದೆ.
ಪೂವಪ್ಪ ನಾಯ್ಕ ಅವರು ಆ.22 ರಂದು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆ ಸಮೀಪದ ಮುಂಡ್ರುಪ್ಪಾಡಿ ಸೇತುವೆಯ ಮೃತ್ಯುಂಜಯ ನದಿಗೆ ಮೀನು ಹಿಡಿಯಲೆಂದು ಬಲೆ ಹಿಡಿದುಕೊಂಡು ಹೋಗಿ ನದಿಯಬಸೇತುವೆ ಅಡಿಯಲ್ಲಿ ಬಲೆ ಹಾಕಿ ತನ್ನ ಮಗ ದಿನೇಶ್ ನನ್ನು ಅಲ್ಲೆ ನಿಲ್ಲಿಸಿ ಮತ್ತೊಂದು ಕಡೆ ಬಲೆ ಹಾಕಲು ತೆರಳಿ ಅಲ್ಲಿಂದ ರಾತ್ರಿ ಸುಮಾರು 7.30. ಕ್ಕೆ ಬಂದವರು ನಂತರ ಡ್ಯಾಂ ಬಳಿಯ ಬಲೆ ತೆಗೆಯಲು ವಾಪಸ್ಸು ಹೋದವರು ಸುಮಾರು ಹೊತ್ತಾದರೂ ತಂದೆ ಬಾರದೇ ಇದ್ದಾಗ ದಿನೇಶ್ ಅವರು ಇತರರಿಗೆ ಮಾಹಿತಿ ನೀಡಿ ಹುಡುಕಾಡಿದಾಗ ಸ್ಥಳೀಯರೊಬ್ಬರ ತೋಟದಲ್ಲಿ ಬಾಯಿಯಲ್ಲಿ ನೊರೆ ಬಂದ ರೀತಿಯಲ್ಲಿ ಕಂಡು ಬಂದಿದ್ದು, ಪರಿಶೀಲಿಸಿದಾಗ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಗ ದಿನೇಶ್ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ಸಾವು

















