ಭೀಮರಾವ್ ಸಾಹಿತ್ಯಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿ : ಡಾ.ಪ್ರಭಾಕರ ಶಿಶಿಲ

ಸಾಹಿತ್ಯದಲ್ಲಿ ಮುಂದುವರೆದರೇ ಭೀಮರಾವ್‌ ವಾಷ್ಠರ್‌ ಉತ್ತಮ ಸಾಹಿತಿಯಾಗುತ್ತಿದ್ದರು. ಇನ್ನೂ ಇತರ ಕ್ಷೇತ್ರಗಳ ಬಿಟ್ಟು ಸಾಹಿತಿಯಾಗಿ ಕವಿಯಾಗಿ ಹೆಚ್ಚು ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಲಿ ಅವರು ಸಾಹಿತ್ಯದ ಬೆಳವಣಿಗೆಗಾಗಿ ತ್ಯಾಗ ಮಾಡಿದ ವ್ಯಕ್ತಿ ಎಂದು ಹಿರಿಯ ಲೇಖಕ ಡಾ.ಪ್ರಭಾಕರ ಪ್ರಭಾಕರ ಶಿಶಿಲ ಹೇಳಿದರು.
ಅವರು ಸುಳ್ಯದಲ್ಲಿ ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ನಡೆದ ಭೀಮರಾವ್ ವಾಷ್ಠರ್ ಉತ್ಸವದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಸಂಘಟಕ, ಗಾಯಕ ಲಕ್ಷ್ಮಣ್ ಪೆರುಮಾಳ್ ಮಾತನಾಡಿ ವಾಷ್ಠರ್‌ ಅವರು ಚಂದನ ಸಾಹಿತ್ಯ ವೇದಿಕೆಯ ಮೂಲಕ ನೂರಾರು ಜನರನ್ನು ಸಾಹಿತ್ಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಬೆಳೆಸಿದ್ದಾರೆ ಎಂದರು.
ಸುಳ್ಯದಲ್ಲಿ ಕಳೆದ 25 ವರ್ಷಗಳಿಂದ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ಬೆಂಗಳೂರಿನಲ್ಲಿ ನೆಲೆಸಲು ತೆರಳುತ್ತಿರುವ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ, ಸಾಹಿತಿ ಹೆಚ್ ಭೀಮರಾವ್ ವಾಷ್ಟರ್ ಕೋಡಿಹಾಳ ಇವರನ್ನು ಈ ಸಂದರ್ಭದಲ್ಲಿ ಅಭಿನಂದನೆಸಲಾಯಿತು. ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮತ್ತು ಕರ್ನಾಟಕ ಭಾವೈಕತಾ ಪರಿಷತ್‌ ಅಧ್ಯಕ್ಷ ಇಟ್ಬಾಲ್ ಬಾಳಿಲ ಸನ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿ ಗೌಡ, ಹಿರಿಯ ಸಾಹಿತಿಗಳಾದ ವೈಲೇಶ್ ಪಿ ಎಸ್ ಕೊಡಗು, ಹಾ. ಮ. ಸತೀಶ್ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಖ್ಯಾತ ಕವಾಯತ್ರಿ, ಶಿಕ್ಷಕಿ ಸಂಧ್ಯಾ ಕುಮಾ‌ರ್ ಉಬರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕವತ್ರಿ ಅನುರಾಧ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.ಪೂರ್ಣಿಮ ತೋಟಪ್ಪಾಡಿ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top