ದ.ಕ ಜಿಲ್ಲೆಯಲ್ಲಿ ಮಾದರಿ ಕಾಫಿ ಕ್ರಷಿ ಮಾಡೋಣ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದ.ಕ ಜಿಲ್ಲೆಯಲ್ಲಿ ಅಡಿಕೆಯೊಂದಿಗೆ ಕಾಫಿ ಬೆಳೆದು ಮಾದರಿ‌ ಕಾಫಿ‌ ಕ್ರಷಿ‌ ಮಾಡೋಣ ಎಂದು‌ ಸಂಸದ ಕ್ಯಾಪ್ಟನ್ ಬ್ರಿಜೇಶ್ ಔಟ ಹೇಳಿದರು.
ಅವರು‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನವಾಗಿ ಕಾಪಿಕೊ ಉದ್ಘಾಟನೆ ಹಾಗೂ ಕಾಫಿ ಬೆಳೆ ಉತ್ತೇಜನ ಕಾರ್ಯಗಾರಕ್ಕೆ ಆ.೨೫ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಸುಳ್ಯ ಭಾಗದಲ್ಲಿ ಈಗಾಗಲೇ ಅಡಿಕೆ ಹಳದಿ ರೋಗದಿಂದ ಕೃಷಿಕರು ಕಂಗೆಟ್ಟಿದ್ದು, ಕೃಷಿಕರು ಅಡಿಕೆ ಜೊತೆಗೆ ಉಪಬೆಳೆಯಾಗಿ ಕಾಫಿಯನ್ನು ಬೆಳೆ ಉತ್ತೇಜಿಸುವ ಸಲುವಾಗಿ ಕಾಪಿಕೋ ಉದ್ಘಾಟನೆಯಾಗಿದೆ.ಅಡಿಕೆ ಬೆಳೆ ನಮ್ಮ ಸಂಸ್ಕತಿಯ ಪ್ರತಿಕ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಕ್ರಷಿ ಸಚಿವರ ಗಮನಕ್ಕೆ ತರಲಾಗಿದೆ.ನಾವು ಅವಸರದಲ್ಲಿ ಕಾಫಿ ಬೆಳೆಯನ್ನು ಮಾಡದೆ ವೈಜ್ಞಾನಿಕವಾಗಿ ಕಾಫಿ ಕ್ರಷಿ ಮಾಡಬೇಕು .ನಮ್ಮ ಕಾಫಿ ಬೆಳೆಗರಿಗೆ ಕಾಫಿ ಮಂಡಳಿಯ ಸಹಕಾರ ಸಿಕ್ಕಿದರೆ ಯಶಸ್ವಿ ಕಾಫಿ ಕ್ರಷಿಕರಾಗಬಲ್ಲರು.ಇದರಿಂದ ಮಂಡಳಿಯ ಸಹಕಾರ ಅಗತ್ಯ ಎಂದು ಹೇಳಿದರು.
ಭಾರತೀಯ ಕಾಫಿ ಬೋರ್ಡ್ ಅಧ್ಯಕ್ಷ ದಿನೇಶ್ ಎಂ.ಜೆ., ಮಂಗಳೂರು ನಬಾರ್ಡ್ ಡಿಡಿ ಸಂಗೀತ ಕರ್ತ, ಮಂಗಳೂರು ತೋಟಗಾರಿಕಾ ಇಲಾಖೆ ಡಿ.ಸಿ ಮಂಜುನಾಥ್, ಭಾರತೀಯ ಕಾಫಿ ಬೋರ್ಡ್ ಮಡಿಕೇರಿ ಉಪನಿರ್ದೇಶಕ ಡಾ.ವಿ.ಚಂದ್ರಶೇಖರ, ಕಾರ್ತಿಕ್ ಮಂಜುನಾಥ್,ಡಾ.ಪ್ರದೀಪ್ ,ಗೋಪಣ್ಣ,ನಗರ ಪಂಚಾಯತ್ ಅಧ್ಯಕ್ಷೆ ಶಶೀಕಲ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಂಬೆ,ಕಾಪಿಕೊ ಸಂಚಾಲಕ ಸಂತೋಷ್ ಕುತ್ತಮೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹಸಂಚಾಲಕ ಆರ್.ಕೆ ಭಟ್ ಸಕಲೇಶಪುರ ಹೆವೆನ್ ಬೀನ್ ಟೀಮ್ ಅಧ್ಯಕ್ಷ ಡಾ.ಧರ್ಮರಾಜ್, ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top