ಸುಳ್ಯ ನಗರ ಪಂಚಾಯತ್ ನಗರವನ್ನು ಸ್ವಚ್ಛ ಸುಳ್ಯ ನಗರವನ್ನಾಗಿಸಲು ದಿಟ್ಟ ಹೆಜ್ಜೆ ಇರಿಸಿದೆ.
ನಗರ ಪಂಚಾಯತ್ ಆವರಣದ ಒಳಗಡೆಯ ಶೆಡ್ ನಲ್ಲಿ ರಾಶಿ ಹಾಕಲಾದ ಕಸವನ್ನೆಲ್ಲ ಲಾರಿಯಲ್ಲಿ ತುಂಬಿ ಇದೀಗ ಕಸದ ಲೋಡ್ ಗಳನ್ನು ಮೈಸೂರು ಮತ್ತು ಬೆಳಗಾವಿಗೆ ಸಾಗಿಸಲಾಗುತ್ತಿದೆ.
ಸಂಸದ ಬ್ರಿಜೇಶ್ ಚೌಟ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಸುಳ್ಯ ನಗರ ಮಹಾ ಶಕ್ತಿಕಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ ಮುತುವರ್ಜಿಯಲ್ಲಿ ಕಸವನ್ನು ಸಾಗಿಸಲಾಗುತ್ತಿದೆ. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರು ಕಸ ಸಾಗಾಟದ ವಿಷಯದಲ್ಲಿ ಉತ್ಸುಕರಾಗಿರುವುದು ಇದಕ್ಕೆ ಇನ್ನೊಂದು ಮುಖ್ಯ ಕಾರಣವಾಗುತ್ತದೆ. ಸುಳ್ಯ ನಗರ ಪಂಚಾಯತ್ ಅಧ್ಯೆಕ್ಷೆ ಶಶಿಕಲಾ ನೀರಬಿದಿರೆ ಅವರು ಇಡೀ ಸುಳ್ಯವನ್ನು ಕ್ಲೀನ್ ಸಿಟಿ ಮಾಡುವುದಕ್ಕೆ ಮುಂದೆ ನಿಂತದ್ದು ಪ್ರತಿಯೊಬ್ಬರು ಶ್ಲಾಘಿಸಬೇಕಾದ ವಿಚಾರ. ಮಂಗಳೂರಿನ ಗ್ರೀನ್ ಸ್ಪೇಸ್ ಕಂಪೆನಿ ಮೂಲಕ ಈ ಕಸವನ್ನು ಸಾಗಿಸಲಾಗುತ್ತಿದೆ. 2022, 2023ರಲ್ಲಿ ಕೂಡ ಇದೇ ಸಂಸ್ಥೆಯ ಮೂಲಕವೇ ಕಸವನ್ನು ಸಾಗಿಸಲಾಗಿತ್ತು. ಕಸವನ್ನು ಸಾಗಿಸುವ ವೇಳೆ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಸೇರಿದಂತೆ ಎಲ್ಲ ಸದಸ್ಯರು ಈ ಒಂದು ಕೆಲಸಕ್ಕೆ ಸಹಕಾರ ನೀಡಿದ್ದಾರೆ. ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯಕ್, ನಗರ ಪಂಚಾಯತ್ ಸದಸ್ಯರಾದ ಶಿಲಾ ಕುರುಂಜಿ, ಶಿಲ್ಪ ಸುದೇವ್, ಉಮ್ಮರ್, ರಿಯಾಜ್ ಕಟ್ಟೆಕ್ಕಾರ್, ಸುಪ್ರೀತ್ ಮೋoಟಡ್ಕ, ನಾರಾಯಣ ಶಾಂತಿನಗರ, ತಿಮಪ್ಪ , ನಗರ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ವೇಗ ಪಡೆದುಕೊಂಡ ಸುಳ್ಯ ನಗರದ ಕಸ ಸಾಗಾಟ

















