ಪಾನತ್ತೂರು ಪೆರಾಜೆ ಅಂತರ್ ರಾಜ್ಯ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸಲು ಕೇರಳ ಅರಣ್ಯ ಸಚಿವರಿಗೆ ಮನವಿ

ಪಣತ್ತೂರು -ಕಲ್ಲಪ್ಪಳ್ಳಿ ರಸ್ತೆಯು ಸರಿ ಸುಮಾರು 3.5km ರಸ್ತೆಯು ಅರಣ್ಯ ಇಲಾಖೆಯ ಪ್ರದೇಶವಾಗಿದ್ದು, ಮುಂದಿನ ಪಣತ್ತೂರು -ಪೆರಾಜೆ ಅಂತರ್ ರಾಜ್ಯ ಕರೀಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಪ್ರದೇಶವು ಅಡ್ಡಿಯಾಗಿದ್ದ ಹಿನ್ನಲೆಯಲ್ಲಿ, ಈ ಅರಣ್ಯ ಪ್ರದೇಶದಲ್ಲಿ 15mtr ರಸ್ತೆಯ ಅಗಲೀಕರಣ ಮಾಡಲು ಅನುಮತಿ ಕೋರಿ, ಸಮಿತಿಯ ಅಧ್ಯಕ್ಷರಾದ ಶ್ರೀ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ಇವತ್ತು ಕೇರಳ ರಾಜ್ಯದ ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ಎ.ಕೆ.ಶಶಿoದ್ರನ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ kanchngad ವಿಧಾನಸಭಾ ಕ್ಷೇತ್ರದ ಎಂ ಎಲ್ ಎ ಶ್ರೀ ಇ. ಚಂದ್ರಶೇಖರನ್ ಅವರ ಕಚೇರಿಗೆ ಭೇಟಿ ಮಾಡಿ, ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ಅವರಲ್ಲಿ ರಸ್ತೆ ಅಭಿವೃದ್ಧಿ ವಿಚಾರವಾಗಿ, ಮಾಹಿತಿ ನೀಡಿ ಮನವಿ ಸಲ್ಲಿಸಲಾಯಿತು…ಮುಂದಿನ ಯೋಜನೆ ಸಹಕಾರ ನೀಡುವಂತೆ ಭರವಸೆ ನೀಡಿರುತ್ತಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೂರ್ನಡ್ಕದಲ್ಲಿ ಅಂತರಾಜ್ಯ ರಸ್ತೆ ಕಾರಿಡಾರ್ ಯೋಜನೆಯ ಸಮನ್ವಯ ಸಮಿತಿ ಸಭೆ.
ಕೇರಳ ರಾಜ್ಯದ ಪಾಣತ್ತೂರು ರಾಜ್ಯ ಹೆದ್ದಾರಿಯಿಂದ ಕಲ್ಲಪಳ್ಳಿ ಮಾರ್ಗವಾಗಿ ಕರ್ನಾಟಕ ರಾಜ್ಯದ ಸುಳ್ಯ ತಾಲೂಕಿನ ಬಡ್ಡಡ್ಕವನ್ನು ಸೇರಿ ಅಲ್ಲಿಂದ ಕೊಡಗು ಜಿಲ್ಲೆಯ ಕುಂದಲ್ಪಾಡಿಯಿಂದ ಕುಂಬಳಚೇರಿ ರಸ್ತೆ ಮುಖಾಂತರ ಕಾಸ್ಪಾಡಿ ಎನ್ನುವಲ್ಲಿ 275 ನೇ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕ ಮಾಡುವ 15 ಮೀಟರ್ ಅಗಲದ ನೂತನವಾಗಿ ಅಂತರಾಜ್ಯ ದ್ವಿಪದ ರಸ್ತೆ ನಿರ್ಮಾಣದ ಗುರಿ ಹೊಂದಿರುವ ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಸಮನ್ವಯ ಸಮಿತಿಯ ವಿಶೇಷ ಸಭೆಯು ತಾ. 25 ರಂದು ಸಮಿತಿ ಅಧ್ಯಕ್ಷರಾದ ಸೂರ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕೂರ್ನಡ್ಕ ಶಾಂತರಾಮ್ ಅವರ ನಿವಾಸದ ವಠಾರದಲ್ಲಿ ನೆರವೇರಿತು.
ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾ ಗಿದ್ದು ಮೊದಲಿಗೆ ರಸ್ತೆಯ ಎರಡು ಬದಿಯ ಭೂ ಮಾಲೀಕರ ಒಪ್ಪಿಗೆ ಪಡೆಯಲು ರಸ್ತೆ ಹಾದು ಹೋಗುವ ಎಲ್ಲಾ ಗ್ರಾಮಗಳಲ್ಲಿ ಸಭೆ ಕರೆಯುವಂತೆ ನಿರ್ಧಾರಿಸಲಾಯಿತು. ಇದರ ಅಂಗವಾಗಿ ಪ್ರಥಮ ಸಭೆ ಪೆರಾಜೆ ಗ್ರಾಮಸ್ತರ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 1ರಂದು ಮಧ್ಯಾಹ್ನ 3 ವರೆ ಗಂಟೆಗೆ ಕುಂಬಳಚೇರಿ ಸಹಕಾರಿ ಪತ್ತಿನ ಸಭಾ ಭವನದಲ್ಲಿ ನಡೆಯಲಿದೆ.
ಮುಂದೆಗೆ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರಿಗೆ ಅಲ್ಲದೇ ಕಾಸರಗೋಡು ಎಂಪಿ ರಾಜಗೋಪಾಲ್ ಕೇರಳ ರಾಜ್ಯ ಸರ್ಕಾರದ ಅರಣ್ಯ ಸಚಿವ ಶಶಿಧರ್, ಶಾಸಕ ಚಂದ್ರಶೇಖರ್,ದಕ್ಷಿಣಕನ್ನಡ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ, ಕೊಡಗು ಮೈಸೂರು ಎಂಪಿ ಯದುವೀರ್ ಒಡೆಯರ್, ಸುಳ್ಯ ಶಾಸಕಿ ಭಾಗೀರಥಿ, ವಿರಾಜಪೇಟೆ ಶಾಸಕ ಪೊನ್ನಣ್ಣ, ಮಾಜಿ ವಿಧಾನ ಸಭಾ ಅಧ್ಯಕ್ಷ ಕೆ. ಜಿ. ಬೋಪಯ್ಯ ಅವರಿಗೆ ಮನವಿ ಪತ್ರ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಕಲ್ಲಪಳ್ಳಿ ವಾರ್ಡ್ ಪಂಚಾಯತ್ ಸದಸ್ಯ ರಾಧಾಕೃಷ್ಣ, ಪೆರಾಜೆ ಗ್ರಾಮದ ಕೊಳಂಗಾಯ ಹರೀಶ್, ಪೆರುಮುಂಡ ಜಯಪ್ರಕಾಶ್, ಕರಿಕೆ ಗ್ರಾಮದ ಕೋಡಿ ಸೀತಾರಾಮ, ಕಳ್ಳಪಳ್ಳಿ ಜಾರ್ಜ್, ಟಿ. ಜಿ. ರವಿ, ಟಿ. ಜಿ. ಸೂರ್ಯನಾರಾಯಣ ಭಟ್, ಮೊದಲದವರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top