ಪಾಲಡ್ಕ : ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಪಡಿಸಿದ ಕಾಡಾನೆಗಳು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪಾಲಡ್ಕ ಸಮೀಪ ಕಾಡಾನೆಗಳು ಮತ್ತೆ ಗುರುವಾರ ಮುಂಜಾನೆ ಸ್ಥಳೀಯರ ತೋಟಗಳಿಗೆ ನುಗ್ಗಿ ಕೃಷಿ
ನಾಶಪಡಿಸಿದ ಘಟನೆ ವರದಿಯಾಗಿದೆ. ಪಾಲಡ್ಕ ಅಮೆಮನೆ ವಾಸುದೇವ, ಪೆರುಮುಂಡ ಶೇಷಪ್ಪ ಗೌಡ,ಅಮೆಮನೆ ಮೇದಪ್ಪ ಗೌಡರ ತೋಟಗಳಿಗೆ ನುಗ್ಗಿ್ದ ಕಾಡಾನೆಗಳು ,ಅಡಿಕೆ,ತೆಂಗು,ಬಾಳೆ ಇತರ ಕ್ರಷಿಗಳನ್ನು ನಾಶ ಮಾಡಿ ಹಾಕಿವೆ .ಪರಿಣಾಮ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ..ಕೊಳೆರೋಗದಿಂದ ಹೈರಾಣಾದ ರೈತರಿಗೆ ಕಾಡಾನೆಗಳು ಬಂದು ಬೆಳೆ ನಾಶಪಡಿಸುತ್ತಿರುವುದು ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು
ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸತತ ಕಾಡಾನೆಗಳಿಂದ ರೈತರು ಕಂಗೆಟ್ಟಿದ್ದಾರೆ. ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಕಾಡಿನಂಚಿನಲ್ಲಿ ಕಾಡಾನೆಗಳು ಹಗಲು ಹೊತ್ತಿನಲ್ಲಿ ಬೀಡುಬಿಡುತ್ತಿವೆ. ಮತ್ತೆ ರಾತ್ರಿ ಸಮಯ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ತೋಟಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ.ಬೆಳೆ ನಾಶದ ಜೊತೆಗೆ ಪ್ರಯಾಣಿಕರಿಗೆ ಸ್ಥಳೀಯ ಜನರ ಜೀವಕ್ಕೆ ಕಾಡಾನೆಗಳಿಂದ ಅಪಾಯ ಎದುರಾಗಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾಡಾನೆಗಳು ಹಾನಿ ಮಾಡಿರುವ ಬೆಳೆಗಳ ಪೋಟೋ ತೆಗೆದುಕೊಂಡು ಹೋಗಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರೆ .ಕಾಡಾನೆಗಳನ್ನು ಓಡಿಸುವ ಯಾವ ಕೆಲಸವನ್ನು ಮಾಡುತ್ತಿಲ್ಲ.ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕೆಲುವು ದಿನಗಳ ಹಿಂದೆ ರೈತರೊಬ್ಬರನ್ನು ಕಾಡಾನೆ ತುಳಿದು ಹಾಕಿ ಕೊಂದಿದೆ. ಇಂತಹ ಘಟನೆ ಇಲ್ಲಿ ಸಂಭವಿಸಿದರೆ ಯಾರು ಹೊಣೆ ಈ ಭಾಗದಲ್ಲಿ ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಸಬೇಕು ತಪ್ಪಿದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಈ ಭಾಗದ ರೈತರು ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top