ಗುರವಿನೊಂದಿಗೆ ಗೌರವ ಭಾವನೆ ಇದ್ದಾಗ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅರಂತೋಡು ನೆಹರೂ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಸೆ.5ರಂದು ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಠ್ಯದ ಶಿಕ್ಷಣ ಪಡೆಯುವುದಲ್ಲ.ಸಾಮಾಜಿಕ ಸಂಬಂಧ ನೈತಿಕೆಯ ಬಗ್ಗೆ ಸಮಾಜದಿಂದ ಶಿಕ್ಷಣ ಪಡೆಯುವ ಅಗತ್ಯ ಇದೆ.ಇದು ಭವಿಷ್ಯದಲ್ಲಿ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಬಲ್ಲದು.ಜೀವನ ಪರಿಪೂರ್ಣಗೊಳ್ಳುವುದೇ ಶಿಕ್ಷಣದಿಂದ ಅವರು ಎಂದು ಹೇಳಿದರು.
ಶಾಸಕರ ನಿರ್ಗಮಾನದ ಬಳಿಕ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಅಧ್ಯಾಪಕ ರಾಮಕೃಷ್ಣ ಭಟ್ ದಿಕ್ಸೂಜಿ ಭಾಷಣ ಮಾಡಿ ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆಗೆ ಏಕ ರೀತಿಯ ಶಿಕ್ಷಣ ನಿಯಮ ಸರಕಾರ ಜಾರಿಗೆ ತರಬೇಕು.ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆ ಎಂದು ಸರಕಾರ ವರ್ಗಿಕರಣ ಮಾಡುವುದು ಸರಿಯಲ್ಲ ಇದು ಭವಿಷ್ಯದಲ್ಲಿ ಶಿಕ್ಷಣ ವ್ಯವಸ್ಥೆಗೆ ಮಾರಕ ಎಂದು ಹೇಳಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯೆ ಮಾಲಿನಿ, ತಹಶೀಲ್ದಾರ್ ಮಂಜುಳಾ, ತಾ.ಪಂ. ಇ.ಒ. ರಾಜಣ್ಣ, ಅರಂತೋಡು ವಿದ್ಯಾಸಂಸ್ಥೆಯ ಸಂಚಾಲಕ ಕೆ.ಆರ್.ಗಂಗಾಧರ್, ಅರಂತೋಡು ಎನ್.ಎಂ.ಪಿ.ಯು.ಸಿ.ಲಳಳಲಳಳಳಳಳಳಳಳಳಳ ಸುರೇಶ್ ವಾಗ್ಲೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತೀನ್ ಪ್ರಭು, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಶಿಕ್ಷಕರುಗಳ ವಿವಿಧ ಸಂಘಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಇದ್ದರು.ಅ
ಸನ್ಮಾನ ಕಾರ್ಯಕ್ರಮ ಗಳು ನೆರವೇರಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಸ್ವಾಗತಿಸಿದರು. ಕಾರ್ಯಕ್ರಮ ನೋಡೆಲ್ ಗೋಪಿನಾಥ್ ವಂದಿಸಿದರು.
ಶಿಕ್ಷಕಿ ಚಂದ್ರಮತಿ, ಕಿಶೋರ್ ಕುಮಾರ್ ಕಿರ್ಲಾಯ ಧನಂಜಯ ಕಾರ್ಯಕ್ರಮ ನಿರೂಪಿಸಿದರು.
ಗುರುವಿನೊಂದಿಗೆ ಗೌರವ ಭಾವನೆ ಇದ್ದಾಗ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ : ಶಾಸಕಿ ಭಾಗೀರಥಿ ಮುರುಳ್ಯ



































