ಸಂಸ್ಥೆ ಪ್ರಾರಂಭವಾಗಿ ಅತೀ ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ   ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಗೌರವ ಸನ್ಮಾನ

ಅತೀ ಕಡಿಮೆ ಅವಧಿಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿ ಗ್ರಾಹಕರನ್ನು ತನ್ನ ಸೆಳೆಯುತ್ತಿರುವ ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿ ರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ
ಈ ಬಾರಿಯ ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಲ್ಲಿ ಸೆ. 6ರಂದು ಸಂಜೆ ನಡೆಯಿತು.ಅತಿಥಿ ಗಣ್ಯರನ್ನು ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ.ಗೌಡ ಹಾಗೂ ಸಂಜೀವ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಎಣ್ಮೂರು ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕ ಮೋಹನ್, ದೇವಚಳ್ಳ ಶಾಲೆಯ‌ ಮುಖ್ಯ ಶಿಕ್ಷಕ ಶ್ರೀಧರ ಗೌಡ ಕೆರೆಮೂಲೆ ಹಾಗೂ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲಲಿತಾ‌ಕುಮಾರಿಯವರನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ ರವರು ಸನ್ಮಾನಿಸಿ ಗೌರವಿಸಿದರು. ಬಳಿಕ ಅವರು ಮಾತನಾಡಿ, ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಿದ ಸ್ವರ್ಣಂ ಜ್ಯುವೆಲ್ಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಸನ್ಮಾನ ಸ್ವೀಕರಿಸಿದ ಶಿಕ್ಷಕರು ಮಾತನಾಡಿ ತಮ್ಮ ಶಾಲೆಯ ಬಗ್ಗೆ ಅನುಭವ ಹಂಚಿಕೊಂಡರು.
ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಿರ್ವಹಿಸಿದರು.
ಡಿ.ಜಿ ಪ್ಲಸ್ ಮಾಲಕ ಚಂದ್ರಶೇಖರ್ ನಂಜೆ, ಸಂಸ್ಥೆಯ ಪಾಲುದಾರರಾದ ಸಂಜೀವ ನಾಯ್ಕ್, ಪ್ರವೀಣ್ ಬಿ. ಗೌಡ , ಭವಿತ್, ಲೋಕೇಶ್ ಹಾಗೂ ಗದಗಸಿಬ್ಬಂದಿ ಶೋಧನ್, ವಹನಪತ್ರಕರ್ತರಾದ ತೇಜೇಶ್ವರ ಕುಂದಲ್ಪಾಡಿ, ಕೆ.ಟಿ. ಭಾಗೀಶ್ ಉಪಸ್ಥಿತರಿದ್ದರು.
ಸುದ್ದಿ ಬಿಡುಗಡೆ ವರದಿಗಾರ ಶ್ರೀಜಿತ್ ಸಂಪಾಜೆ ಸಹಕರಿಸಿದರು.
ಸ್ವರ್ಣಂ ಜ್ಯುವೆಲ್ಸ್ ಇತ್ತೀಚೆಗೆ 2 ಗ್ರಾಮ್ ಕರಿಮಣಿ ಸರಗಳನ್ನು ಭರ್ಜರಿ ಮಾರಾಟ ಮಾಡಿ ತಾಲೂಕಿನ ಮಹಿಳೆಯರ ಗಮನ‌ ಸೆಳೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top