ಸರಕಾರಿ ಯೋಜನೆ ಪಡೆಯಲು ಹಕ್ಕು ಪತ್ರ ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ

ಹಕ್ಕುಪತ್ರ ಸರಕಾರಿ ಯೋಜನೆಗಳನ್ನು ಪಡೆಯಲು ಪೂರಕವಾಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಾಲ್ಕೂರು ಗ್ರಾಮದ ಗುಂಡಡ್ಕ ಕಾಲೋನಿಯ ೧೮ ಮಂದಿಗೆ ೯೪ಸಿ ಯೋಜನೆಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಽಗಳು ಜೊತೆಗೆ ಊರಿನ ಜನರಲ್ಲೂ ಅಭಿವೃದ್ಧಿಯ ಭಾವಗಳಿರಬೇಕು. ಗುಂಡಡ್ಕ ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಽಗಳು, ಮಾಧ್ಯಮದವರು, ಸ್ಥಳೀಯರು, ನಾಯಕರು ಶ್ರಮಿಸಿದ್ದಾರೆ. ಈ ಶ್ರಮದ ಫಲವಾಗಿ ಇಂದು ಹಕ್ಕುಪತ್ರ ಲಭಿಸಿದೆ. ಮುಂದೆ ಹಕ್ಕುಪತ್ರದ ಮೂಲಕ ಸರಕಾರದ ಯೋಜನೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ಎಂದರು. ಇನ್ನು ಇಲ್ಲಿ ಬಾಕಿ ಇರುವ ೧೦ ಮಂದಿಗೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಭರವಸೆ ನೀಡಿದರು.
ಸುಳ್ಯ ತಹಶೀಲ್ದಾರ್ ಮಂಜುಳಾ ಮಾತನಾಡಿ, ಮನೆ ಮಾಡಿ ಹಲವು ವರ್ಷಗಳಿಂದ ವಾಸವಿದ್ದ ಗುಂಡಡ್ಕ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ತೊಡಕು ಉಂಟಾಗಿತ್ತು. ಫಲಾನುಭವಿಗಳು ವಾಸವಿದ್ದ ಸ್ಥಳದ ಸರ್ವೇ ನಂಬರ್‌ನಲ್ಲಿ ಹಿಂದೆ ಆಶ್ರಯ ಯೋಜನೆ ಉದ್ದೇಶಕ್ಕಾಗಿ ೩ ಎಕ್ರೆಯನ್ನು ಸರಕಾರದಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಖಾದಿರಿಸಲಾಗಿತ್ತು, ಇಲ್ಲೇ ಫಲಾನುಭವಿಗಳು ಮನೆ ಕಟ್ಟಿ ೯೪ಸಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರಿಂದ, ಇಲ್ಲಿನ ಸಮಸ್ಯೆ ಪರಿಹರಿಸಲು ಹಲವು ಪ್ರಕ್ರಿಯೆಗಳು ಸಮಯ ತೆಗೆದುಕೊಂಡಿದ್ದು ಸಮಸ್ಯೆಯಾಗಿತ್ತು ಎಂದ ಅವರು ಇಂದು ನಿಮಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮುಳಿಯ, ಗುತ್ತಿಗಾರು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ಉಪಾಧ್ಯಕ್ಷೆ ಭಾರತಿ ಮತ್ತಿತರರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ರಂಜನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಆಡಳಿತಾಧಿಕಾರಿ ಭಾರತಿ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top