ಸರಕಾರ ಕೆಂಪು ಕಲ್ಲು ಸಾಗಾಟ ನಿಷೇಧ ಮಾಡಿದುದರಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಲಾರಿ ಮಾಲಕರೊಬ್ಬರು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಸೆ.10 ವರದಿಯಾಗಿದೆ.
ಎಲಿಮಲೆಯ ಭಾನುಪ್ರಕಾಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ.ಈ ಘಟನೆ ನಡೆದಿದ್ದು ವಿಷಯ ತಿಳಿದ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿದುಬಂದಿದೆ.
ಫೈನಾನ್ಸ್ ನವರ ಕಿರುಕುಳದ ಆರೋಪ – ಲಾರಿ ಮಾಲಕ ಆತ್ಮಹತ್ಯೆ ಯತ್ನ



































