ನೆಲ್ಲೂರು‌ ಕೆಮ್ರಾಜೆ : ತಾಳೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ

ನೆಲ್ಲೂರು ಕೆಮ್ರಾಜೆ ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಕಾರದಿಂದ ಗ್ರಾಮ ಪಂಚಾಯತ್ ಸಭಾ ಭವನ ನೆಲ್ಲೂರು ಕೆಮ್ರಾಜೆಯಲ್ಲಿ ತಾಳೆ ಕೃಷಿ ಬಗ್ಗೆ ರೈತರಿಗೆ ತರಬೇತಿ ಮತ್ತು ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಚಂದ್ರಾವತಿಯವರು ವಹಿಸಿದ್ದರು. ತಾಳೆ ಕೃಷಿಯ ಬಗ್ಗೆ ಮಾಹಿತಿಯನ್ನು ಕೃಷ್ಣಾ ವೈ.ಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 3 F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಏರಿಯಾ ಮ್ಯಾನೇಜರ್ ನೀಡಿದರು. ಕ್ಲಸ್ಟರ್ ಸೂಪರ್ ವೈಸರ್ ರವಿಶಂಕರ್ ತಾಳೆ ಕೃಷಿಗೆ ಬೇಕಾಗುವ ದಾಖಲೆಗಳು ಮತ್ತು ಸಬ್ಸಿಡಿ ವಿಷಯದ ಕುರಿತು ಮಾಹಿತಿ ನೀಡಿದರು. ಸುಳ್ಯ ತಾಲೂಕಿನ ಎಲ್ಲಾ ಕೃಷಿ ಸಖಿಯರು ತಮ್ಮ ಗ್ರಾಮದ ರೈತರಿಗೆ ತಾಳೆ ಕೃಷಿಯ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಂದನಾ, ಒಕ್ಕೂಟ ಕಾರ್ಯದರ್ಶಿ ಮಮತಾ, ಪಂಚಾಯತ್ ಸದಸ್ಯರಾದ ವೇಣುಗೋಪಾಲ, NRLM ಸಂಜೀವಿನಿ ತಾಲೂಕು ಸಿಬ್ಬಂದಿಗಳಾದ ಮೇರಿ, ರೂಪರವರು ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ), ನೆಲ್ಲೂರು ಕೆಮ್ರಾಜೆ ಎಂ.ಬಿ.ಕೆ ಪವಿತ್ರಾ, ಎಲ್ ಸಿ ಆರ್ ಪಿ ಗಳಾದ ಸುಚಿತ್ರಾ, ಮಮತಾ, ಕೃಷಿ ಸಖಿ ಗೀತಾ ವಿ, ಪಶುಸಖಿ ಅನುರಾಧ, ಕೃಷಿಕರು, ಸಂಘದ ಪದಾಧಿಕಾರಿಗಳು, ಸದಸ್ಯೆಯರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top