ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದಿಂದ ಕೇರಳ ಪೊಲೀಸರಿಂದ ಸೆ.17ರಂದು ತಪ್ಪಿಸಿಕೊಂಡಿದ್ದ ಪಾಲಕ್ಕಾಡ್ ಮೂಲದ ಕೊಲೆ ಆರೋಪಿಗಳು ಎಂದು ಹೇಳಲಾಗುತ್ತಿರುವ ಇಬ್ಬರು ದೇವರಕೊಲ್ಲಿ ಮನೆಯೊಂದರಲ್ಲಿ ಸೆ.18ರಂದು ಪತ್ತೆಯಾಗಿದ್ದಾರೆ.
ಸಿಕ್ಕಿ ಬಿದ್ದವರು ಓರ್ವ ಯುವಕ ಹಾಗೂ ಒಬ್ಬಳು ಯುವತಿ ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡಿದ್ದ ಇವರು ರಾತ್ರಿ ವೇಳೆ ರಬ್ಬರ್ ತೋಟದ ಮನೆಯ ಬಳಿ ಬಂದು ಆಶ್ರಯ ಪಡೆದಿದ್ದರು.
ಸ್ಥಳೀಯರು ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ

















