ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಆಸ್ಪತ್ರೆ ಯ ಕಾನೂನು ಸಲಹೆಗಾರ ಮೂಸಕುಂಜಿ ಪೈಂಬಿಚಾಲ್ ತಿಳಿಸಿದರು.
ಸೆ. 20ರಂದು ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಒ.ಟಿ. ಕಾಂಪ್ಲೆಕ್ಸ್‌ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಹಾಗೂ ಐವನ್ ಡಿ’ಸೋಜಾ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಸರಗೋಡು ದೇಲಂಪಾಡಿ ಜಿ.ಪಂ. ಸದಸ್ಯ ಮುಹಮ್ಮದ್ ಶಫೀಕ್, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಣ್ಣೂರು ಸೈ ಹಾಸ್ಪಿಟಲ್
ಗ್ರೂಪ್‌ನ ಚೇರ್ ಬೆಂಗಳೂರು ಮಿಲಪ್ ಚಂ ಅಧ್ಯಕ್ಷೆ ಗೀತಾ
ಗ್ರೂಪ್‌ನ ಚೇರ್‌ಮನ್‌ ಡಾ. ವಸುದೇವನ್ ಟಿ.ಪಿ., ಬೆಂಗಳೂರು ಮಿಲನ್ ಪೈವುಡ್ ಸಪ್ಲಯರ್ನನ ಮಿಲಪ್ ಚಂದ್ ಜೈನ್, ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ ಮತ್ತಿತರರು ಭಾಗವಹಿಸಲಿದ್ದಾರೆ.ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ 100 ಬೆಡ್ ಗಳನ್ನು ಒಳಗೊಂಡಿರುವ ಆಸ್ಪತ್ರೆಯಾಗಿದ್ದು ಇಲ್ಲಿ ಶೀಘ್ರದಲ್ಲೇ 24 ಗಂಟೆಗಳ ತುರ್ತು ಚಿಕಿತ್ಸೆ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ, ಒಂದೇ ಸೂರಿನಡಿ ತಜ್ಞ ವೈದ್ಯರಿಂದ ಸಮಗ್ರ ವೈದ್ಯಕೀಯ ಸೇವೆ ಸಿಗಲಿದೆ. ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು
ಅಳವಡಿಸಿಕೊಳ್ಳಲಾಗಿದ್ದು, ಗುಣಮಟ್ಟದ ಸೇವೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ವಿಶಾಲ್ ತಜ್ಞ ವೈದ್ಯರಾದ ಡಾ. ಯು.ಪಿ.(ಜನರಲ್ ಮೆಡಿಸಿನ್), ಡಾ. ಸ್ವಾತಿ ಪಿ.(ಜನರಲ್ ಮೆಡಿಸಿನ್), ಡಾ. ನಂದಕಿಶೋರ್ (ಆರ್ಥೋಪೆಡಿಕ್ಸ್‌), ১. ಅದ್ರಾಮ ಇಬ್ರಾಹಿಂ (ಪೆಡಿಯಾಟ್ರಕ್ಸ್), ಡಾ. ಪ್ರಸಾದ್ ‘ನಾಯಕ್ (ಪೆಡಿಯಾಟ್ರಕ್ಸ್), ಡಾ. ಪ್ರದೀಪ್ ಶೆಣೈ( ನೆಪ್ರೊಲಾಜಿಸ್ಟ್), (ಯುರೊಲಾಜಿಸ್ಟ್), ಡಾ. ರಂಜಿತ್ ಇತರರು ಸೇವೆಗೆ ಲಭ್ಯ ಇರುತ್ತಾರೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಅಬೂಬಕರ್ ಅಡ್ಕಾರ್,ಉದ್ಯಮಿ ಆರಿಫ್ ತೆಕ್ಕಿಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯಶಾಹಿದ್ ಪಾರೆ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top