ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.ಸಂಪಾಜೆ.ಇದರ 48 ನೇ ವಾರ್ಷಿಕ ಮಹಾಸಭೆಯು ಇಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಘದ ಅದ್ಯಕ್ಷರಾದ ಶ್ರೀ .ಯನ್.ಸಿ.ಅನಂತ್ ಊರುಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಪ್ರಸ್ತುತ 2811 ಸದಸ್ಯರನ್ನು ಹೊಂದಿದ್ದು, ರೂ.279.14 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. ಹಾಗೆಯೇ ಸಂಘದಲ್ಲಿ ರೂ.3483.42 ಲಕ್ಷ ಠೇವಣಿ ಇದ್ದು,ರೂ.3846.65 ಲಕ್ಷ ಗಳಷ್ಟನ್ನು ಸದಸ್ಯರಿಗೆ ಸಾಲವಾಗಿ ನೀಡಲಾಗಿರುತ್ತದೆ.2024.25 ರ ಅವಧಿಯಲ್ಲಿ ರೂ.3858626 ಗಳಷ್ಟು ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ 9 % ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ಅದ್ಯಕ್ಷ ಶ್ರೀ. ಅನಂತ್ ರವರು ಮಾತನಾಡಿ ,ಸ್ಪರ್ದೆಗೆ ಬಿದ್ದಂತೆ ಕೇವಲ ಹೆಚ್ಚು ಲಾಭ ಗಳಿಸುವುದನ್ನೇ ಪ್ರಮುಖ ಗುರಿಯಾಗಿಸಿಕೊಳ್ಳದೆ ,ಸದಸ್ಯರಿಗೆ ಕನಿಷ್ಠ ದರದಲ್ಲಿ ಗರಿಷ್ಠ ಸೇವೆ ಮತ್ತು ಸಹಕಾರ ನೀಡುವ ಉದ್ದೇಶದಿಂದ ನಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.ಮುಂದಿನ ವರ್ಷ 2026 ರಲ್ಲಿ ತಮ್ಮ ಸಂಘವು 50 ವರ್ಷ ಪೂರೈಸುತ್ತಿರುವುದರಿಂದ ಎಲ್ಲಾ ಗ್ರಾಮಸ್ಥರ ಮತ್ತು ಸಹಕಾರಿ ಬಂಧುಗಳ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಆಚರಿಸಲಿರುವ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ 90% ರಿಂತ ಅಧಿಕ ಅಂಕ ಗಳಿಸಿದ 24 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಸಂಘದ ನಿರ್ದೇಶಕಿಯರಾದ ಶ್ರೀಮತಿ ವಾಣಿ ಮತ್ತು ಪ್ರಿಯಾಂಕ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಸಂಘದ ಸಿ ಇ ಓ ಶ್ರೀ. ಆನಂದ .ಬಿ.ಕೆ ವರದಿ ವಾಚನ ಮಾಡಿದರೆ,ಕೊನೆಯಲ್ಲಿ ಉಪಾಧ್ಯಕ್ಷ ಶ್ರೀ. ಯಶವಂತ. ಡಿ.ಡಿ ವಂದಿಸಿದರು.
ಸಂಪಾಜೆ ; ಪಯಸ್ವಿನಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಹಾಸಭೆ

















