ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.೫ರಂದು ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ಶ್ರೀ ಮಹಾವಿಷ್ಣು ಮಹಾಯಾಗದ ಸಮಿತಿ ಸಂಚಾಲಕ ವಿ.ಜೆ ವಿಖ್ಯಾತ್ ಸುಳ್ಯ ತಿಳಿಸಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೃಷಿ ಪರಂಪರೆಯ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಹಾಗೂ ೨೦೨೬ನೇ ಎಪ್ರಿಲ್ ತಿಂಗಳಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳ ಕರಿಕಳ ಇದರ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ಕಾತಿಕ ಮಾಸ ಹುಣ್ಣಿಮೆಯ ನ.೫ರಂದು ಬೆಳಗ್ಗೆಯಿಂದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿದಾವರ ಉಪಸ್ಥಿತಿಯಲ್ಲಿ ಕ್ಷೇತ್ರದಸ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೋಡಿಮಠದ ಸ್ವಾಮೀಜಿಗಳು ಆಶÃರ್ವಚನ ನೀಡಲಿದ್ದಾರೆ. ಮಹಾಯಾಗಕ್ಕೆ ಸಮಿತಿ ರಚಿಸಿ ಕೆಲಸ-ಕಾರ್ಯಗಳು ನಡೆಯುತ್ತಿದೆ, ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಭಕ್ತರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಡಾ.ರವಿಕಕ್ಕೆಪದವು, ಪ್ರಧಾನ ಕರ್ಯದರ್ಶಿ ಚಂದ್ರಪ್ರಕಾಶ್ ಕಂಬಳ, ಪ್ರಮುಖರಾದ ದಾಮೋದರ, ನಳಿನಾಕ್ಷಿ, ಕುಸುಮಾವತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನ.೫ಕ್ಕೆ ನಿಡ್ವಾಳ ಮಹಾವಿಷ್ಣು ದೇವಳದಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ



































