ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಮತ್ತೆ ಪ್ರಾರಂಭವಾಗಲಿದೆ ಯಕ್ಷಗಾನ ಮೇಳ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಮತ್ತೆ ಯಕ್ಷಗಾನ ಮೇಳ ಪ್ರಾರಂಭವಾಗಲಿದ್ದು ಯಕ್ಷಗಾನ ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿಸಿದೆ.
ಆದಿಸುಬ್ರಹ್ಮಣ್ಯ ಕೃ‍ಪಾಪೋಷಿತ ಯಕ್ಷಗಾನ ನಾಟಕಸಭಾ ಸುಬ್ರಹ್ಮಣ್ಯ ಎಂಬ ಹೆಸರಿನ ಬಯಲಾಟ ಮೇಳವು 1990ರವರೆಗೆ ತಿರುಗಾಟ ನಡೆಸಿತ್ತು.
ಪುತ್ತೂರು ಬನ್ನೂರಿನ ಶೀನಪ್ಪ ಭಂಡಾರಿ ಇದನ್ನು ಮುನ್ನಡೆಸುತ್ತಿದ್ದರು. ಅವರಿಗೆ ವಯಸ್ಸಾದ ನಂತರ ಮೇಳದ ತಿರುಗಾಟ ನಿಂತಿತ್ತು. ಇದೀಗ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹೆಸರಿನಲ್ಲಿ ತಿರುಗಾಟ ಪ್ರಾರಂಭಿಸಲಿರುವ ಮೇಳವು, ಸ್ಥಳ ಪುರಾಣದ ಕಥಾಹಂದರ ಹೊಂದಿರುವ ‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ’ ಹಾಗೂ ಸಿ. ರಾಘವೇಂದ್ರ ಕುಂಬ್ಳೆ ವಿರಚಿತ ‘ಸರ್ಪ ಸಂಪತ್ತ್’ ಎಂಬ ಎರಡು ಹೊಸ ಪ್ರಸಂಗಗಳೊಂದಿಗೆ ಪ್ರಸಂಗ ಪ್ರದರ್ಶನಕ್ಕೆ ಸಜ್ಜಾಗಿದೆ ಎಂದು ತಿಳಿದು ಮಾಹಿರಿ ಲಭ್ಯವಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top