ಮರ್ಕಂಜ : ಕಾಡಿನಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ- ಬೆಳ್ತಂಗಡಿ ಶೌರ್ಯವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಸಂಪಾಜೆ ವಲಯ ಸುಳ್ಯ ತಾಲೂಕು. ಇದರ ಕಾಡಿನಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ನಂದಗೋಕುಲ ಅನಾಥಶ್ರಮ ಮಿತ್ತಡ್ಕ ದಲ್ಲಿ ಗಿಡ ನೆಡುವ ಮೂಲಕ ಯೋಜನಾಧಿಕಾರಿ ಮಾಧವ ಗೌಡ ರವರು ಉದ್ಘಾಟಿಸಿದರು ನಂತರಮಾತನಾಡಿ ‘ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ’ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಿಸರಕ್ಕೆ ಪೂರಕವಾಗುವಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದಕ್ಕೆ ಗ್ರಾಮದ ಜನರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ಪೂಜ್ಯರ ವಿಶೇಷ ಕಲ್ಪನೆಯಾಗಿ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಶೌರ್ಯವಿಪತ್ತು ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿ ನಡೆಸಲಾಗುತ್ತಿದೆಯೆಂದು ಶುಭಹಾರೈಸಿ ಗ್ರಾಮದ ಐತ ಎಂಬವರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಪೂಜ್ಯರು ಮಂಜೂರು ಮಾಡಿದ 25000/-ರೂ ಮೊತ್ತದ ಮಂಜೂರಾತಿ ಪತ್ರವನ್ನು ಮಾನ್ಯ ಯೋಜನಾಧಿಕಾರಿಯವರು ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಗೀತಾ ಹೊಸೊಳಿಕೆ, ಮರ್ಕಂಜ, ಮಿತ್ತಡ್ಕ, ಗೋಳಿಯಡ್ಕ ಒಕ್ಕೂಟದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಹಾಗೂ ನಿಕಟಪೂರ್ವ ಪದಾಧಿಕಾರಿಗಳು, ಸಂಪಾಜೆ ವಲಯದ ಮೇಲ್ವಿಚಾರಕರಾದ ಹರೀಶ್, ನಂದಗೋಕುಲ ಅನಾಥಾಶ್ರಮ ಮತ್ತು ಗಜಾನನ ಯುವತಿ ಮಂಡಲ ಸದಸ್ಯರು ಉಪಸ್ಥಿತರಿದ್ದರು. ಹಾಗೂ ಸಂಪಾಜೆ ವಲಯದ ಶೌರ್ಯ ವಿಪತ್ತು ಘಟಕದ ಪುನೀತ್ ಪ್ರಸನ್ನ ಮತ್ತು ಎಲ್ಲಾ ಸದಸ್ಯರುಗಳು ಹಾಜರಿದ್ದು ಗಿಡ ನಾಟಿ ಮಾಡುವ ಮೂಲಕ ಯಶಸ್ವಿಗೊಳಿಸಿದರು ಈ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಕೃಷಿ ಮೇಲ್ವಿಚಾರಕರಾದ ರಮೇಶ್ ರವರು ನಡೆಸಿದರು.ಸೇವಾ ಪ್ರತಿನಿಧಿ ಶ್ರೀಮತಿ ರೋಹಿಣಿ ಎಲ್ಲರಿಗೂ ಧನ್ಯವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top