ಹಾಸನ ಜಿಲ್ಲೆಯಲ್ಲಿ ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮತ್ತು ಅವರ ಪತಿಯ ಮೇಲೆ ಬೀದಿ ನಾಯಿಗಳು ಓಡಿಸಿಕೊಂಡು ಬಂದು ಕಚ್ಚಿರುವ ಘಟನೆ ವರದಿಯಾಗಿದೆ.
ಶಿಕ್ಷಕಿಗೆ ಮುಖ, ಕೈ-ಕಾಲು, ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯವಾಗಿವೆ.ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರದಲ್ಲಿ ಘಟನೆ ನಡೆದಿದೆ. ಶಿಕ್ಷಕಿಯನ್ನು ಬಚಾವ್ ಮಾಡಲು ಬಂದ ಇತರ ಏಳು ಮಂದಿ ಮೇಲೂ ನಾಯಿಗಳ ದಾಳಿ ಮಾಡಿವೆ. ಬೀದಿ ನಾಯಿಗಳ ದಾಳಿಗೆ ಒಳಗಾಗಿ ಶಿಕ್ಷಕಿ ಚಿಕ್ಕಮ್ಮ ತೀವ್ರ ಗಾಯಗೊಂಡಿದ್ದು ಇವರು ಪಟ್ಟಣದ ಜಿಎಚ್ಪಿಎಸ್ ಶಾಲೆಯ ಶಿಕ್ಷಕಿಯಾಗಿದ್ದಾರೆ.
ಜಾತಿ ಗಣತಿಗೆ ತೆರಳಿದ ಶಿಕ್ಷಕಿ ಹಾಗೂ ಅವರ ಪತಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು!

















