ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ದೈವದ ದೈವಸ್ಥಾನ ಜೀರ್ಣೊದ್ದಾರಗೊಳ್ಳುತ್ತಿದ್ದು ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಡಿ.26,27,28ರಂದು ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ವಿವಿಧ ಸಮಿತಿಗಳ ಪೂರ್ವಭಾವಿ ಸಭೆ ಹಾಗೂ ಜೀರ್ಣೊದ್ದಾರ ಪ್ರಯುಕ್ತ ಲಕ್ಕಿಕೂಪನ್ ಬಿಡುಗಡೆ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಅ.4ರಂದು ನಡೆಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ ಅಧ್ಯಕ್ಷತೆ ವಹಿಸಿದ್ದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು. ವ್ಯವಸ್ಥಾಪನಾ ಸಮಿತಿ (ಟ್ರಸ್ಟ್ ) ಅಧ್ಯಕ್ಷ ಕೆ.ಕೆ ನಾರಾಯಣ ಕುಂಟುಕಾಡು ಮತ್ರು ಉಪಾಧ್ಯಕ್ಷ ಹಾಗೂ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯರು ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವಕ್ಕೆ ಆಗಬೇಕಾಗಿರುವ ತಯಾರಿಯ ಬಗ್ಗೆ ಜೀರ್ಣೋದ್ಧಾರ ಕೆಲಸದ ಬಗ್ಗೆ ಮಾಹಿತಿ ನೀಡಿದರು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿದ್ದ ಕಾಟೂರು (ಪಡ್ಪು) ಕೂಸಪ್ಪ ಗೌಡರು ಇತ್ತೀಚೆಗೆ ನಿಧನ ರಾದ ಹಿನ್ನಲೆಯಲ್ಲಿ ಗೌರವಾಧ್ಯಕ್ಷ ಸ್ಥಾನಕ್ಕೆ ಅವರ ಮಗನಾದ ಪದ್ಮಯ್ಯ ಕಾಟೂರು (ಪಡ್ಪು) ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಜೀರ್ಣೊದ್ದಾರ ಸಮಿತಿ ಮಹಿಳಾ ಘಟಕದ ಸಂಚಾಲಕಿ ಮಾಲತಿ ಬೋಜಪ್ಪ, ಜೀರ್ಣೋದ್ಧಾರ ಮತ್ತು ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಕಮಲಾಕ್ಷ ಪಡ್ಪು, ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೊದ್ದಾರ ಸಮಿತಿ ಕೋಶಧಿಕಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಪೆತ್ತಾಜೆ,ವ್ಯವಸ್ಥಾಪನಾ ಸಮಿತಿ ಜೊತೆ ಕಾರ್ಯದರ್ಶಿ ಹಾಗೂ ತೊಡಿಕಾನ ದೇವಳದ ವ್ಯವಸ್ಥಾಪಕರಾದ ಆನಂದ ಕಲ್ಲಗದ್ದೆ, ದೈವಸ್ಥಾನದ ವಿವಿಧ ಸಮಿತಿಗಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ತೊಡಿಕಾನ : ಡಿ.26,27,28ಕ್ಕೆ ಪಡ್ಪು ಶ್ರೀ ಮಹಾವಿಷ್ಣು ದೈವದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ

















