ಪದವಿ ಪೂರ್ವ ಕಾಲೇಜು‌ ವಿಭಾಗದ ದ.ಕ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ,ಎಸ್.ಡಿ.ಎಂ ಉಜಿರೆ ಮತ್ತು ಆಳ್ವಾಸ್ ಮೂಡಬಿದಿರೆ ವಿನ್ನರರ್ಸ್

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಅ.11ರಂದು ಸುಳ್ಯದ ಚೆನ್ನಕೇಶವ ದೇವಳದ ವಠಾರದಲ್ಲಿ ಅತ್ಯಂತ ರೋಚಕವಾಗಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದ ಹುಡುಗರ ವಿಭಾಗದಲ್ಲಿ ಎಸ್.ಡಿ‌.ಎಂ ಕಾಲೇಜು ಉಜಿರೆ ಪ್ರಥಮ‌ ಸ್ಥಾನ ಪಡಕೊಂಡಿದೆ.ದ್ವಿತೀಯ ಸ್ಥಾನವನ್ನು ಮಿಲಾಗ್ರಿಸ್ ಪಿ.ಯು ಕಾಲೇಜು ಪಡೆದುಕೊಂಡಿದೆ.
ಹುಡುಗಿಯರ ವಿಭಾಗದಲ್ಲಿ ಆಳ್ವಾಸ್ ಮೂಡಬಿದ್ರೆ ಪ್ರಥಮ ಸ್ಥಾನವನ್ನು ಕೆನರಾ ಕಾಲೇಜು ದ್ವಿತೀಯ ಸ್ಥಾನವನ್ನು ಪಡಕೊಂಡಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳ ಪಿ.ಯು. ತಂಡಗಳ ಕಬಡ್ಡಿ ಪಂದ್ಯಾಟ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top