ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ-ವಾರ್ಷಿಕ ಮಹಾಸಭೆ

ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ವಾರ್ಷಿಕ ಮಹಾಸಭೆ ದಿನಾಂಕ 12.10.2025 ನೇ ಆದಿತ್ಯವಾರದಂದು ಅಡ್ತಲೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿನಯ್ ಬೆದ್ರುಪಣೆ ಇವರು ವಹಿಸಿದ್ದರು. ಕಾರ್ಯದರ್ಶಿ ಶ್ರೀ ಸಂತೋಷ್ ಪಿಂಡಿಮನೆ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಶ್ರೀ ಸುನಿಲ್ ಅಡ್ತಲೆ ವಾರ್ಷಿಕ ಲೆಕ್ಕಪತ್ರವನ್ನು ಮಂಡನೆ ಮಾಡಿದರು. ಮುಂದಿನ ಒಂದು ವರ್ಷದ ಅವಧಿಗೆ ಈಗಿರುವ ಸಮಿತಿಯನ್ನೇ ಮುಂದುವರೆಸಲಾಯಿತು. ಅಧ್ಯಕ್ಷರಾಗಿ ಶ್ರೀ ವಿನಯ್ ಬೆದ್ರುಪಣೆ, ಉಪಾಧ್ಯಕ್ಷರಾಗಿ ಶ್ರೀ ಲೋಹಿತ್ ಮೇಲಡ್ತಲೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸಂತೋಷ್ ಪಿಂಡಿಮನೆ, ಖಜಾಂಚಿಯಾಗಿ ಶ್ರೀ ಸುನಿಲ್ ಅಡ್ತಲೆ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಕಿಶೋರ್ ಅಡ್ಕ ಪುನರಾಯ್ಕೆಯಾದರು. ನೂತನವಾಗಿ ಕ್ರೀಡಾ ಕಾರ್ಯದರ್ಶಿಯಯಾಗಿ ಶ್ರೀ ರತನ್ ಕಿರ್ಲಾಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀ ಪ್ರವೀಣ್ ಪಾನತ್ತಿಲ ಬೆದ್ರುಪಣೆ, ಮಾಧ್ಯಮ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಅಡ್ತಲೆ ಆಯ್ಕೆಗೊಂಡರು. ನಿರ್ದೇಶಕರಾಗಿ ಶ್ರೀ ಚೇತನ್ ಎಂ.ಎ ಬೆದ್ರುಪಣೆ, ಶ್ರೀ ಕೇಶವ ಮೇಲಡ್ತಲೆ, ಶ್ರೀ ಪ್ರದೀಪ್ ಅಡ್ತಲೆ, ಶ್ರೀ ಜೀವನ್ ಪಿಂಡಿಮನೆ, ಶ್ರೀ ಸ್ವಾತಿಕ್ ಕಿರ್ಲಾಯ, ಶ್ರೀ ಜಗದೀಶ್ ಆಜಡ್ಕ ಕಾಯರ ಆಯ್ಕೆಗೊಂಡರು. ಸದಸ್ಯರಾಗಿ ಶ್ರೀ ದುರ್ಗಾಪ್ರಸಾದ್ ಮೇಲಡ್ತಲೆ, ಶ್ರೀ ದಯಾನಂದ ಬಲ್ಕಾಡಿ ಬೆದ್ರುಪಣೆ, ಶ್ರೀ ಗಿರೀಶ್ ಅಡ್ಕ, ಶ್ರೀ ರಕ್ಷಿತ್ ಚೀಮಾಡು, ಶ್ರೀ ನಿತಿನ್ ಕಿರ್ಲಾಯ, ಶ್ರೀ ಸುನಿಲ್ ಪಿಂಡಿಮನೆ, ಶ್ರೀ ಓಂಪ್ರಸಾದ್ ಪಿಂಡಿಮನೆ, ಶ್ರೀ ಅಶೋಕ ಪಾನತ್ತಿಲ ಬೆದ್ರುಪಣೆ, ಶ್ರೀ ಗೀತೇಶ್ ಕಾಯರ, ಶ್ರೀ ಮನೋಜ್ ಅಡ್ತಲೆ, ಶ್ರೀ ಜ್ಞಾನೇಶ್ ಕಾಯರ, ಶ್ರೀ ನವರಾಜ್ ಕಿರ್ಲಾಯ, ಶ್ರೀ ಸಾತ್ವಿಕ್ ಬೆದ್ರುಪಣೆ, ಶ್ರೀ ಲಿಂಗರಾಜ್ ಮೇಲಡ್ತಲೆ ಇವರುಗಳು ಆಯ್ಕೆಗೊಂಡರು. ಶ್ರೀ ಶ್ರವಣ್ ಪಿಂಡಿಮನೆ ಪ್ರಾರ್ಥಿಸಿ, ಶ್ರೀ ರತನ್ ಕಿರ್ಲಾಯ ಸ್ವಾಗತಿಸಿ, ಶ್ರೀ ಕಿಶೋರ್ ಅಡ್ಕ ಧನ್ಯವಾದಗೈದರು. ಶ್ರೀ ರಂಜಿತ್ ಅಡ್ತಲೆ ನಿರ್ವಹಿಸಿದರು. ಗೌರವ ಸಲಹೆಗಾರರಾದ ಶ್ರೀ ಕೇಶವ ಅಡ್ತಲೆ, ಶ್ರೀ ಭವಾನಿ ಶಂಕರ ಅಡ್ತಲೆ, ಶ್ರೀ ಹರಿಪ್ರಸಾದ್ ಅಡ್ತಲೆ, ಶ್ರೀ ಶಿವರಾಮ ಕಲ್ಲುಗದ್ದೆ ವೇದಿಕೆಯಲ್ಲಿದ್ದು ಸಲಹೆ ಸೂಚನೆಗಳನ್ನು ನೀಡಿದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top