ಪುಣಚ ಗ್ರಾಮ ಪಂಚಾಯತ್ನ ನೂತನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ರವಿಯವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಸಂಪಾಜೆ ಗ್ರಾಮದ ದೊಡ್ಡಡ್ಕ ನಿವಾಸಿಯಾಗಿರುವ ಸೃಜನ್ರವರು ಈ ಹಿಂದೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್ನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲಿಂದ ಪುಣಚ ಗ್ರಾಪಂ ಗೆ ವರ್ಗಾವಣೆಗೊಂಡು ಹೆಚ್ಚುವರಿಯಾಗಿ ಕರೋಪಾಡಿ ಗ್ರಾಪಂನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ.
ಪುಣಚ ಗ್ರಾಪಂ ಪ್ರಭಾರ ಪಿಡಿಓ ಆಗಿ ಸಂಪಾಜೆ ಗ್ರಾಮದ ಸೃಜನ್ ಎ.ಜಿ ಅಧಿಕಾರ ಸ್ವೀಕಾರ

















