ಸುಳ್ಯ ಶಿವ ಕೃಪಾ ಸಭಾಭವನದಲ್ಲಿ ಅ. 13ರಂದು ಪ್ರಜಾಧ್ವನಿ ಕರ್ನಾಟಕ ಕೇಂದ್ರೀಯ ಸಮಿತಿ ಸುಳ್ಯ ಇದರ ವಿಶೇಷ ಸಭೆಯು ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಭೆಯಲ್ಲಿ ಮುಂದಿನ ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ನಿರ್ಣಯಿಸಲಾಯಿತು.
ಸಮಿತಿಯ ವಾರ್ಷಿಕೋತ್ಸವವನ್ನು ಅದೇ ದಿನ ಆಚರಣೆ ಮತ್ತು ಪ್ರಜಾಧ್ವನಿ ಕರ್ನಾಟಕ ಹೆಸರಿನಲ್ಲಿ ನೂತನವಾಗಿ ಯೂಟ್ಯೂಬ್ ಒಂದನ್ನು ಉದ್ಘಾಟನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅಲ್ಲದೇ ಭಾರತದ ಸಂವಿಧಾನದ ವಿಚಾರವಾಗಿ ದೇಶದ ಸರ್ವ ಪ್ರಜೆಗಳು ದೇಶದ ಸಂವಿಧಾನವನ್ನು ರಾಷ್ಟ್ರೀಯ ಗ್ರಂಥವೆಂದು ಭಾವಿಸಿ ಎಲ್ಲರೂ ಸಂವಿಧಾನಕ್ಕೆ ಸಮಾನ ಗೌರವ ಮತ್ತು,ಅದರ ನಿಯಮದ ಪ್ರಕಾರ ಪ್ರತಿಯೊಬ್ಬರಿಗೆ ಹಕ್ಕು, ಈ ಬಗ್ಗೆ ಅರಿವು ಮೂಡಿಸಲು ಸಂವಿಧಾನ ತಜ್ಞ ಹಾಗೂ ಖ್ಯಾತ ಸಾಹಿತಿಯೊಬ್ಬರನ್ನು ಆಹ್ವಾನಿಸಿ ಸಭೆಯ ಮುಖ್ಯ ಅಥಿತಿಯಾಗಿ ಉಪನ್ಯಾಸಕ್ಕೆ ಆಯ್ಕೆ ಮಾಡುವಂತೆ ಮತ್ತು ಕೆಲವು ಸಾಹಿತಿಗಳ ಹೆಸರು ಪಡೆದು ಅಂದಿನ ದಿನಕ್ಕೆ ಅವುಗಳಲ್ಲಿ ಒಬ್ಬರನ್ನು ಸಮಯವಕಾಶ ಕೇಳಿ ಬರಮಾಡಿಕೊಳ್ಳುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೆ. ಸಿ. ಹರೀಶ್. ಪೆರಾಜೆ. ಎ. ಕೆ. ಇಬ್ರಾಹಿಂ. ದಿನಾಕರ ಪೈ. ಪ್ರಮೀಳಾ ಪೆಲ್ತಡ್ಕ. ಮಹೇಶ್ ಬೆಳ್ಳರ್ಕಾರ್. ಸಾವುಕಾರ್ ಆಶ್ರಫ್. ಭರತ್ ಕುಕ್ಕುಜಡ್ಕ. ವಸಂತ ಪೆಲ್ತಡ್ಕ. ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಾಹುಕಾರ್ ಅಶ್ರಫ್ ಅವರು ವಂದಿಸಿದರು.
ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ.

















