ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪಾಪಿ ವೈದ್ಯ

ಬೆಂಗಳೂರು; ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯ 6 ತಿಂಗಳ ಬಳಿಕ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿ ವೈದ್ಯನ ನೀಚ ಕೆಲಸ ಬಯಲಾಗಿದ್ದು ಆತನನ್ನು ಉಡುಪಿಯ ಮಣಿಪಾಲದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ಬಂಧಿತ ಆರೋಪಿ‌ ಎಂದು ತಿಳಿದು ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಯಲ್ಲಿ ಸಿಬ್ಬಂದಿಯಾಗಿದ್ದ ಆಗಿದ್ದ ಕೃತಿಕಾ ರೆಡ್ಡಿ ಕೊಲೆಯಾದವರು.
ಡಾ ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಇಬ್ಬರು 2024ರ ಮೇ 26ರಂದು ಎರಡು ಕುಟುಂಬಗಳ ಒಪ್ಪಂದಂತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಮೃತ ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆ ಇತ್ತು. ಆದರೆ ಇದನ್ನು ಮುಚ್ಚಿಟ್ಟು ಮನೆಯವರು ಮದುವೆ ಮಾಡಿದ್ದರು ಎನ್ನುವ ಆರೋಪಿಸಲಾಗಿದೆ.
ಮದುವೆಯಾದ ಬಳಿಕ ಡಾ ಮಹೇಂದ್ರ ರೆಡ್ಡಿ ಇದನ್ನು ತಿಳಿದುಕೊಂಡಿದ್ದನು. ಕೃತಿಕಾಗೆ ನಿತ್ಯ ವಾಂತಿ ಹಾಗೂ ಇತರೆ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದವು. ಇದೇ ಕಾರಣಕ್ಕೆ ಆರೋಪಿ ಮಹೇಂದ್ರ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದನು. ಹನ್ನೊಂದು ತಿಂಗಳ ನಂತರ ಪ್ಲಾನ್ ಮಾಡಿ, ಕುಟುಂಬಸ್ಥರು ಇದು ನ್ಯಾಚುರಲ್ ಡೆತ್ ಅಂತ ನಂಬುವಂತೆ ಕೊಲೆ ಮಾಡಿದ್ದನು.
ಕೃತಿಕಾ ಮನೆಯಲ್ಲಿ ಹುಷಾರಿಲ್ಲದೆ ಮಲಗುತ್ತಿದ್ದಳು. ತಂದೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಅಲ್ಲಿಗೆ ಡಾ ಮಹೇಂದ್ರ ರೆಡ್ಡಿ ಬಂದಿದ್ದನು. ಈ ವೇಳೆ ಆತ ಹೆಂಡತಿಗೆ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದನು. ಇವುಗಳನ್ನು 2 ದಿನ ನಿರಂತರ ನೀಡಲಾಗಿತ್ತು. ಬಳಿಕ 2025ರ ಏಪ್ರಿಲ್ 23 ರಂದು ಕೃತಿಕಾಗೆ ಮೂರ್ಚೆ ತಪ್ಪಿದ್ದರಿಂದ ಪೋಷಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ಜೀವ ಹೋಗಿದೆ ಎಂದು ಹೇಳಿದ್ದರು.
ಇದಾದ ಮೇಲೆ ಅಸ್ಪತ್ರೆಯಿಂದ ಡೆತ್ ಮೆಮೊ ಬಂದಿತ್ತು. ಡೆತ್ ಮೆಮೊ ಬಂದಿದ್ದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿ ದೂರು ನೀಡುವಂತೆ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆದ್ರೆ ಕುಟುಂಬಸ್ಥರು ಸಹ ದೂರು ನೀಡಲು ಹಿಂದೇಟು ಹಾಕಿದ್ದರು. ಈ ನಡುವೆ ಅವರಿಂದ ದೂರು ಪಡೆದು ಮಾರತಹಳ್ಳಿ ಪೊಲೀಸರು ಯುಡಿಆರ್ ದಾಖಲು ಮಾಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹದ ಸ್ಯಾಂಪಲ್ ಪಡೆದು ಎಫ್‌ಎಸ್‌ಎಲ್ಲೆ ಕಳುಹಿಸಿದ್ದರು.
ಸದ್ಯ ಎಫ್‌ಎಸ್‌ಎಲ್ ವರದಿ ಬಂದಿದ್ದು ವರದಿಯಲ್ಲಿ ಕೃತಿಕಾ ದೇಹದಲ್ಲಿ ಅನಸ್ತೇಶಿಯಾ ಅಂಶಗಳು ಕಂಡುಬಂದಿವೆ. ಸಾವಿಗೆ ಇದೇ ಅನಸ್ತೇಶಿಯಾ ಅಂಶಗಳೇ ಕಾರಣ ಎಂದು ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಕೇಸ್ ದಾಖಲು ಮಾಡಲಾಗಿದೆ. ಆರು ತಿಂಗಳ ಬಳಿಕ ಯುಡಿಆರ್ ಆಗಿದ ಪ್ರಕರಣ ಇದೀಗ ಕೊಲೆ ಎಂದು ಪ್ರಕರಣ ದಾಖಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top