ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಹಾಸ್ಪಾರೆ ಎಂಬಲ್ಲಿ ರಸ್ತೆಗೆ ಹಾಗೂ ವಿದ್ಯುತ್ ಲೈನ್ ಗೆ ಬಾಗಿಕೊಂಡಿದ್ದ ಎರಡು ಮರಗಳನ್ನು ತೆರವುಗೊಳಿಸಲಾಯಿತು.
ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ಸದಸ್ಯರ ಉಸ್ತುವಾರಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಅರಂತೋಡು, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯವರ ಸಮನ್ವಯ ಕಾರ್ಯಾಚರಣೆಯೊಂದಿಗೆ ತೆರವುಗೊಳಿಸಲಾಯಿತು.ಅಪಾಯಕಾರಿ ಮರ ತೆರವುಗೊಳಿಸುವಲ್ಲಿ ಅನೇಕ ಮಂದಿ ಸಹಕರಿಸಿದರು.
ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಅಪಾಯಕಾರಿ ಮರಗಳ ತೆರವು

















